ಹರಿಹರ ತಾಲ್ಲೂಕಿನ ಗಂಗನರಸಿ ಶ್ರೀ ಗೋಣಿಬಸವೇಶ್ವರ ಸ್ವಾಮಿ ಹೊರಮಠದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯುವುದು. ನಂತರ ಮಧ್ಯಾಹ್ನ 11.30ಕ್ಕೆ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ. ಶ್ರೀಮತಿ ಭಾರತಿ ಶ್ರೀ ಸತ್ಯನಾರಾಯಾಣ ಕೋಂ ಕೃಷ್ಣಾಜಿರಾವ್ ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ, ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.
February 5, 2025