ಇನ್ನರ್‌ವ್ಹೀಲ್‌ನಿಂದ ಮಾಗನೂರು ಬಸಪ್ಪ ಶಾಲಾ ಮಕ್ಕಳಿಗೆ ಕಾರ್ಯಕ್ರಮ

ಇನ್ನರ್‌ವ್ಹೀಲ್‌ನಿಂದ ಮಾಗನೂರು ಬಸಪ್ಪ ಶಾಲಾ ಮಕ್ಕಳಿಗೆ ಕಾರ್ಯಕ್ರಮ

ದಾವಣಗೆರೆ, ಫೆ.8- ಇಲ್ಲಿನ ಇನ್ನರ್‌ವ್ಹೀಲ್ ಸಂಸ್ಥೆ ವಿದ್ಯಾನಗರ ಶಾಖೆಯಿಂದ  ಮಾಗನೂರು ಬಸಪ್ಪ ಶಾಲೆಯ ಹೆಣ್ಣು ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಪರಿಸರ ತಜ್ಞರೂ, ಹಿರಿಯ ಸ್ತ್ರೀರೋಗ ವೈದ್ಯರೂ ಆದ ಡಾ. ಶಾಂತಾ ಭಟ್ ಅವರು ಮಕ್ಕಳಿಗೆ ಪರಿಸರ ಕಾಳಜಿ, ಮುಟ್ಟಿನ ಸಮಯದ ಸುರಕ್ಷತೆ ಬಗ್ಗೆ  ಮಾಹಿತಿ ನೀಡಿದರು.

ಇನ್ನರ್ ವ್ಹೀಲ್ ಸಂಸ್ಥೆ ಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಕರ್ಜಗಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಕಾರ್ಯದರ್ಶಿ ಪ್ರೇಮಾ ಮಹೇಶ್ವರಪ್ಪ, ಶ್ರೀಮತಿ ಎ.ಎಸ್. ಕುಸುಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!