ರಾಣೇಬೆನ್ನೂರು, ಫೆ.8- ಇಲ್ಲಿನ ತಾಲ್ಲೂಕು ಗಂಗಾಮತ ಸಂಘದಿಂದ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಇದೇ ದಿನಾಂಕ 10 ರಂದು ವರ್ತಕರ ಸಂಘದ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ರಾಜು ಜಾಡಮಾಲಿ ತಿಳಿಸಿದ್ದಾರೆ. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಸಮಾಜದ ಮುಖಂಡರಾದ ಮಂಜುನಾಥ ಪುಟಗನಾಳ, ರಾಮಚಂದ್ರ ಐರಣಿ, ಡಾ. ನಾಗರಾಜ ದೊಡ್ಡಮನಿ, ಮಂಜುನಾಥ ಭೋವಿ, ಚಂದ್ರಶೇಖರ್ ಜಾಡರ, ಮಂಜುನಾಥ ಕುಂಬಳೂರ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
December 25, 2024