ಇಂದಿನಿಂದ `ನೂರು ದಿನ ಸಾವಿರ ಹಳ್ಳಿ ಒಂದು ಗುರಿ’

ಇಂದಿನಿಂದ `ನೂರು ದಿನ ಸಾವಿರ ಹಳ್ಳಿ ಒಂದು ಗುರಿ’

ರೇವಣಸಿದ್ಧೇಶ್ವರ  ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ, ಶಾಖಾಮಠ, ಕನಕಧಾಮ, ಹೊಸದುರ್ಗ, ಚಿತ್ರದುರ್ಗ,  ಬೆಂಗಳೂರು ವಿಭಾಗದ ಪೀಠಾಧ್ಯಕ್ಷರಾದ  ಈಶ್ವರಾನಂದ ಪುರಿ  ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ `100 ದಿನ ಸಾವಿರ ಹಳ್ಳಿ ಒಂದು ಗುರಿ’ ಕಾರ್ಯಕ್ರಮ  ಸಮೀಪದ ಆಲೂರು ಗ್ರಾಮದಲ್ಲಿ  ಇದೇ 19ನೇ  ಶುಕ್ರವಾರ ಬೆಳಿಗ್ಗೆ ಉದ್ಘಾಟನೆಯಾಗಲಿದೆ.

ದಾವಣಗೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಪೂಜ್ಯರು ಭೇಟಿ ನೀಡುವ ಪ್ರವಾಸದ ವೇಳಾಪಟ್ಟಿ:

ಇಂದು ಬೆಳಿಗ್ಗೆ 9 ಗಂಟೆಗೆ ಆಲೂರು, 11 ಗಂಟೆಗೆ ಅಣಜಿ, 1 ಗಂಟೆಗೆ ಹಾಲುವರ್ತಿ, 3 ಗಂಟೆಗೆ ನೀರ್ಥಡಿ, 4 ಗಂಟೆಗೆ ರುದ್ರಕಟ್ಟೆ, 5 ಗಂಟೆಗೆ ಕೊಗ್ಗನೂರು, 5.30ಕ್ಕೆ ನೇರ್ಲಿಗೆ, 6 ಗಂಟೆಗೆ ಮಾಯಕೊಂಡದ ಕಾರ್ಯಕ್ರಮ ಮುಗಿಸಿ, ರಾತ್ರಿ ಬೀರೇಶ್ವರ ದೇವಸ್ಥಾನದ ಅತಿಥಿಗೃಹದಲ್ಲಿ ತಂಗಲಿದ್ದಾರೆ.

ನಾಳೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಮತ್ತಿ, 10.30ಕ್ಕೆ ಹೂವಿನಮಡು, 11.30ಕ್ಕೆ ಲೋಕಿಕೆರೆ, 12.30ಕ್ಕೆ ರಾಮಗೊಂಡನಹಳ್ಳಿ, 2.30ಕ್ಕೆ ಮಳಲಕೆರೆ, 3.30ಕ್ಕೆ ಬಾಡ, 4.30ಕ್ಕೆ ಅಣಬೇರು, ಸಂಜೆ 6 ಕ್ಕೆ ನಲ್ಕುಂದದ ಕಾರ್ಯಕ್ರಮ ಮುಗಿಸಿ   ದಾವಣಗೆರೆಯಲ್ಲಿ ತಂಗಲಿದ್ದಾರೆ. 

ನಾಡಿದ್ದು ಭಾನುವಾರ ಬೆಳಿಗ್ಗೆ 9 ಕ್ಕೆ ಹೊಸಬಿಸಲೇರಿ, 10 ಗಂಟೆಗೆ ದುರ್ಗಾಂಬಿಕಾ ಕ್ಯಾಂಪ್, 11 ಗಂಟೆಗೆ ಮುದಹದಡಿ, 12 ಗಂಟೆಗೆ ಬಟ್ಲಕಟ್ಟೆ, 1 ಗಂಟೆಗೆ ಕನಗೊಂಡನಹಳ್ಳಿ, 2.30ಕ್ಕೆ ಬಲ್ಲೂರು ಶಿರಗನಹಳ್ಳಿ, 3.30ಕ್ಕೆ ಜಡಗನಹಳ್ಳಿ, 4.30ಕ್ಕೆ ನಾಗರಸನಹಳ್ಳಿ, ಸಂಜೆ 5. ಗಂಟೆಗೆ ಕೊಳೇನಹಳ್ಳಿ, ಸಂಜೆ 6 ಗಂಟೆಗೆ ಹದಡಿ ಕಾರ್ಯಕ್ರಮ ಮುಗಿಸಿ ದಾವಣಗೆರೆಯಲ್ಲಿ ತಂಗಲಿದ್ದಾರೆ.

ದಿನಾಂಕ ಸೋಮವಾರ ಬೆಳಿಗ್ಗೆ 9 ಗಂಟೆಗೆ ಶಾಮನೂರು, 10.30ಕ್ಕೆ ಹೊಸಕುಂದವಾಡ, 11 ಕ್ಕೆ ಹಳೇಕುಂದವಾಡ, 12.30ಕ್ಕೆ ನೀಲಾನಹಳ್ಳಿ, 1 ಗಂಟೆಗೆ ದೊಡ್ಡಬಾತಿ, 2.30ಕ್ಕೆ ಆವರಗೊಳ್ಳ, 3.30ಕ್ಕೆ ಕಕ್ಕರಗೊಳ್ಳ, 5.00ಕ್ಕೆ ಚಿಕ್ಕಬೂದಿಹಾಳ್, ಸಂಜೆ 6.00ಕ್ಕೆ ಮಾಳಗೊಂಡನಹಳ್ಳಿ ಕಾರ್ಯಕ್ರಮ ಮುಗಿಸಿ ದಾವಣಗೆರೆಯಲ್ಲಿ ತಂಗಲಿದ್ದಾರೆ.

error: Content is protected !!