ಜಗಳೂರು, ಮಾ. 11 – ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಲ್ಯಾಬ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಯಕರ್ತರು ತಾಲ್ಲೂಕು ಆಡಳಿತ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹೊರಗಡೆ ಖಾಸಗಿ ಲ್ಯಾಬ್‌ನ ರಕ್ತ ಪರೀಕ್ಷೆಯಲ್ಲಿ ಸರ್ಕಾರಿ ಆಸ್ಪತ್ರೆಯ ವರದಿಗೂ ವ್ಯತ್ಯಾಸ ಕಂಡು ಬರುತ್ತಿದೆ. ಲ್ಯಾಬ್‌ನ ಅಧಿಕಾರಿಗಳು ತರಬೇತಿಗೆ ಬಂದ ಲ್ಯಾಬ್ ಟೆಕ್ನೀಷಿಯನ್ ವಿದ್ಯಾರ್ಥಿಗಳಿಂದ ರಕ್ತ ಪರೀಕ್ಷೆ ಮಾಡಿಸುತ್ತಾರೆ. 8 ಜನ ಲ್ಯಾಬ್ ತಜ್ಞರಿದ್ದರೂ ರೂ. 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಲ್ಯಾಬೋರೇಟರಿ ಉಪಯುಕ್ತವಾಗುತ್ತಿಲ್ಲ ಎಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜಿ.ಟಿ. ತಿಪ್ಪೇಸ್ವಾಮಿ ಆರೋಪಿಸಿದರು.
ಆರೋಗ್ಯ ಮಂತ್ರಿ ದಿನೇಶ್ ಗುಂಡುರಾವ್, ಶಾಸಕ ಬಿ. ದೇವೇಂದ್ರಪ್ಪ ಅವರ ಆದೇಶ ಪಾಲಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಉಗ್ರಸ್ವರೂಪ ಹೊರಾಟ ರೂಪಿಸಲಾಗುವುದು ಎಂದರು. ಸಂದರ್ಭದಲ್ಲಿ ಪಧಾದಿಕಾರಿಗಳಾದ ಕೆ.ಎಸ್. ಸಿದ್ದೇಶ್. ಕೆ. ಪ್ರದೀಪ್. ಪತ್ರಕರ್ತ ಎಂ.ಡಿ. ಅಬ್ದುಲ್ ರಖೀಬ್ , ಡಿ.ವಿ. ನಾಗರಾಜ್, ಭರತ್ ಕುಮಾರ್ ಇದ್ದರು.