ದಾವಣಗೆರೆ, ಡಿ.10- ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ಗುಡ್ಡಾಪುರದ ದಾನಮ್ಮ ದೇವಿ ದೇವಸ್ಥಾನದಲ್ಲಿ ಛಟ್ಟಿ ಅಮಾವಾಸ್ಯೆ ಪ್ರಯುಕ್ತ ಪ್ರತಿದಿನ ಸಂಜೆ 7 ಗಂಟೆಗೆ ಪುರಾಣ, ಪ್ರವಚನ ನಡೆಯುತ್ತಿದೆ.
ಶ್ರೀ ಪುಟ್ಟರಾಜ ಕವಿ ಗವಾಯಿಗಳವ ರಿಂದ ರಚಿತ ವಾದ ಶಿವಶರಣೆ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಮತ್ತು ಶ್ರೀ ಅಕ್ಕಮಹಾ ದೇವಿಯ ಚರಿತ್ರೆ ಪ್ರವಚನವನ್ನು ಶ್ರೀ ಪುಟ್ಟರಾಜ ಕವಿ ಗವಾಯಿ ಗಳವರ ಶಿಷ್ಯರಾದ ವೇ. ಮಹಾಂತೇಶ ಶಾಸ್ತ್ರಿಗಳು ಹಿರೇಮಠ (ಕಲ್ಲೂರು, ಚನ್ನಗಿರಿ) ಇವರು ನಡೆಸಿ ಕೊಡುತ್ತಿದ್ದಾರೆ. ಸ್ಥಳೀಯ ಶ್ರೀ ವೀರೇಶ್ವರ ಪುಣ್ಯಾಶ್ರಮದ ಯಲಗೂರೇಶ ಟಕ್ಕಳಿಕಿ ತಬಲಾ ವಾದನ ನುಡಿಸುವರು.
ನಾಡಿದ್ದು ದಿನಾಂಕ 12 ರ ಮಂಗಳವಾರ ಛಟ್ಟಿ ಅಮಾವಾಸ್ಯೆ ಇದ್ದು, ಅಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಮುತ್ತೈದೆ ಯರಿಗೆ ಉಡಿ ತುಂಬುವುದು, ಮದುವೆ ಆಗುವವ ರಿಗೆ ಕಂಕಣ ದಂಡಿ ಹಾಕಿಸುವ ಕಾರ್ಯಕ್ರಮ ಜರುಗಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ. ಶ್ರೀಮತಿ ದೇವರಮನೆ ಗಂಗಮ್ಮ ಮತ್ತು ಮಕ್ಕಳು (ದಾವಣಗೆರೆ), ಶ್ರೀಮತಿ ವೈ. ಭಾರತಿ ಮತ್ತು ವೈ.ವೆಂಕಟೇಶ ರೆಡ್ಡಿ (ಬೆಂಗಳೂರು) ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.