ಜಗಳೂರು, ಡಿ. 10- ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಬೆಳಗಾವಿ ಚಲೋ ಪಾದಯಾತ್ರೆಗೆ ತಾಲ್ಲೂಕಿನಿಂದ ಬೆಂಬಲಿಸಿ ಭಾಗವಹಿಸಲಾಗುವುದು ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಬಿಸ್ತುವಳ್ಳಿ ರಾಜು ಹಾಗೂ ಖಜಾಂಚಿ ಗುತ್ತಿದುರ್ಗ ಶಾಂತಪ್ಪ ತಿಳಿಸಿದ್ದಾರೆ.
ನಾಳೆ ದಿನಾಂಕ 11 ರಂದು ಕಿತ್ತೂರಿನ ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ ಅರಮನೆ ಮೈದಾನದಿಂದ ಬೆಳಗಾವಿ ಸುವರ್ಣ ಸೌಧದವರೆಗೆ ಪಾದಯಾತ್ರೆ ಮೂಲಕ ಆಗಮಿಸಿ, ನಂತರ ನಾಡಿದ್ದು ದಿನಾಂಕ 12 ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ವಿವಿಧ ಬೇಡಿಕೆಗಳನ್ನು ಈಡೇ ರಿಸಲು ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.