ಬೆಳ್ಳೂಡಿಯಲ್ಲಿ ಇಂದು ಭಕ್ತಿ ಸಮರ್ಪಣೆ ಸಮಾರಂಭ

ಬೆಳ್ಳೂಡಿಯಲ್ಲಿ ಇಂದು  ಭಕ್ತಿ ಸಮರ್ಪಣೆ ಸಮಾರಂಭ

ಸಿರಿಗೆರೆ ಬೃಹನ್ಮಠದಲ್ಲಿ ಇದೇ ದಿನಾಂಕ 24 ರಂದು ಜರುಗಲಿರುವ ತರಳಬಾಳು ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 31 ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಹರಿಹರ ತಾಲ್ಲೂಕಿನಿಂದ ಭಕ್ತಿ ಸಮರ್ಪಣೆ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ಬೆಳ್ಳೂಡಿ ಗ್ರಾಮದ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ವಿನಯ ಗುರೂಜಿ ವಹಿಸುವರು.

ಅಮರಾವತಿ ಮಹಾದೇವಪ್ಪ ಗೌಡ್ರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಎಸ್. ಮಲ್ಲಿಕಾರ್ಜುನ್, ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್ ಮತ್ತಿತರರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 10 ರಿಂದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

error: Content is protected !!