ದವನ್‌ ಕಾಲೇಜಿನಲ್ಲಿ ಇಂದು ಶೈಕ್ಷಣಿಕ ವರ್ಷದ ಉದ್ಘಾಟನೆ

ದಾವಣಗೆರೆಯ ದವನ್‌ ಕಾಲೇಜಿನ ಶೈಕ್ಷಣಿಕ ವರ್ಷದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಇಂದು ಮಧ್ಯಾಹ್ನ 3.15 ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ. ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಆಗಮಿಸುವರು. ಎನ್. ಪರಶುರಾಮನಗೌಡ ಅಧ್ಯಕ್ಷತೆ ವಹಿಸುವರು. ವೀರೇಶ್‌ ಪಟೇಲ್‌ ಪ್ರಾಸ್ತಾವಿಕ ನುಡಿಗಳನ್ನಾಡುವರು.

ಕಾರ್ಯಕ್ರಮದಲ್ಲಿ ಆಡಳಿತ  ಮಂಡಳಿ ಸದಸ್ಯ ಡಾ. ಅಂಜು ಜಿ.ಎಸ್‌., ಗಿರೀಶ್‌ ಗೌಡ್ರು, ನಿರ್ದೇಶಕ ಹರ್ಷರಾಜ್‌ ಎ. ಗುಜ್ಜರ್‌, ನೂತನ ಸಂಸ್ಥೆ ನಿರ್ದೇಶಕರಾದ ಶ್ರೀಮತಿ ವಾಣಿ ಮಠಪತಿ, ಪ್ರಾಚಾರ್ಯರಾದ ಶ್ರೀಮತಿ ಅನಿತಾ ಎನ್‌. ಅವರುಗಳು ಉಪಸ್ಥಿತರಿರುವರು.

error: Content is protected !!