ಮಲೇಬೆನ್ನೂರು : ಗ್ರಾಮದೇವತೆ ಹಬ್ಬಕ್ಕೆ ತೀರ್ಮಾನ

ಮಲೇಬೆನ್ನೂರು : ಗ್ರಾಮದೇವತೆ ಹಬ್ಬಕ್ಕೆ ತೀರ್ಮಾನ

ಮಲೇಬೆನ್ನೂರು, ಮೇ 26 – ಮುಂದಿನ ವರ್ಷ ಮಾರ್ಚ್ 19 ಮತ್ತು 20 ರಂದು ಪಟ್ಟಣದ ಗ್ರಾಮ ದೇವತೆ ಶ್ರೀ ಏಕನಾಥೇಶ್ವರಿ ಮತ್ತು ಶ್ರೀ ಕೋಡಿ ಮಾರೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು  ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. 

ಈ ಸಂಬಂಧ ಮೊನ್ನೆ ಅಮ್ಮನವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿ, ಹಬ್ಬ ಆಚರಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

2024ರ ಮಾರ್ಚ್‌ 8ಕ್ಕೆ ಮಹಾಶಿವರಾತ್ರಿ, ಮಾರ್ಚ್ 14ಕ್ಕೆ ಶ್ರೀ ಬಸವೇಶ್ವರ ರಥೋತ್ಸವ ನಡೆಯಲಿದ್ದು, ಮಾರ್ಚ್ 16 ರಿಂದ ಮಾರ್ಚ್ 22 ರವರೆಗೆ ಗ್ರಾಮದೇವತೆ ಹಬ್ಬದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. 

ಮಾರ್ಚ್ 16 ರ ಶನಿವಾರ ರಾತ್ರಿ 8-30 ಕ್ಕೆ ಕಂಕಣ ಬಂಧನ, ಮಾರ್ಚ್ 17 ರ ಭಾನುವಾರ ಮತ್ತು 18 ರ ಸೋಮವಾರ ಉಚ್ಛಾಯ, ಮಾರ್ಚ್ 19 ರ ಮಂಗಳವಾರ ಉಚ್ಛಾಯದ ನಂತರ ರಾತ್ರಿ 10 ಗಂಟೆಯಿಂದ ವಿಶೇಷ ಪೂಜೆ ನಂತರ ಗ್ರಾಮದೇವತೆ ಉತ್ಸವ ಜರುಗಲಿದ್ದು, ಮಾರ್ಚ್ 20ರ ಬುಧವಾರ ಬೆಳಗಿನ ಜಾವ ಹಿಟ್ಟಿನ ಕೋಣದ ಬಲಿ, ಹರಕೆ ಸಮರ್ಪಣೆ ನಡೆಯಲಿದೆ. ಮಾರ್ಚ್ 21ರ ಗುರುವಾರ ಜಾತ್ರೆ, ಹರಕೆ ಸಮರ್ಪಣೆ ಮತ್ತು ಪಟ್ಟಣದೊಳಗೆ ಸಂತೆ ನಡೆಸಲಾಗುವುದು.  

ಮಾರ್ಚ್ 22ರ ಶುಕ್ರವಾರ  ಚರಗ ಚೆಲ್ಲುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುವುದು.      

ಸಭೆಯಲ್ಲಿ ಪೂಜಾರ್ ಬಸಪ್ಪ, ಕೆ.ಜಿ. ಕೊಟ್ರೇಶಪ್ಪ, ಕೆ.ಜಿ. ಪರಮೇಶ್ವರಪ್ಪ, ಕಣ್ಣಾಳ್ ಪರಶುರಾಮಪ್ಪ, ಗೌಡ್ರ ಮಂಜಣ್ಣ, ತಳವಾರ ಹನುಮಂತಪ್ಪ, ಟಿ ಗಜೇಂದ್ರಪ್ಪ, ಸುಬ್ಬಿ ರಾಜಣ್ಣ, ಪ್ರಕಾಶ್ ಚಾರ್,  ಓ .ಜಿ. ಕುಮಾರ್, ಜಿಗಳೇರ ಹಾಲೇಶಪ್ಪ, ಪಾನಿಪೂರಿ ರಂಗನಾಥ್, ಹೊಸಳ್ಳಿ ಕರಿಬಸಪ್ಪ, ಎ.ಕೆ. ನರಸಿಂಪ್ಪ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.

error: Content is protected !!