ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಲಿಂ. ಶ್ರೀ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 111ನೇ ಜನ್ಮದಿನೋತ್ಸವ ಅಂಗವಾಗಿ ಲಿಂ. ಹಾನಗಲ್ಲ ಶ್ರೀ ಗುರು ಕುಮಾರಸ್ವಾಮಿಗಳ, ಶ್ರೀ ಲಿಂ. ಪಂಚಾಕ್ಷರಿ ಗವಾಯಿಗಳ ಹಾಗೂ ಶ್ರೀ ಲಿಂ. ಪುಟ್ಟರಾಜ ಕವಿ ಗವಾಯಿಗಳವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಇಂದು ನಡೆಯಲಿದೆ. ಸದ್ಭಕ್ತರು ಪೂಜ್ಯರುಗಳ ಗದ್ದುಗೆಯ ದರ್ಶನ ಆಶೀರ್ವಾದ ಪಡೆದು ಪುನೀತರಾಗಲು ಶ್ರೀ ಗುರು ಪಂಚಾಕ್ಷರಿ ಗವಾಯಿ ಗಳವರ ಅಂಧರ ಶಿಕ್ಷಣ ಸಮಿತಿ (ಬಾಡಾ ಕ್ರಾಸ್) ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ತಿಳಿಸಿದ್ದಾರೆ.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ವಿಶೇಷ ಪೂಜೆ
