ದಾವಣಗೆರೆ, ಫೆ. 10- ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಾಸುದೇವ ನಾಯಕ ಕೆ.ಬಿ.ಎಲ್. ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತನ್ನ 24ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ. ಪದವಿ ನೀಡಿದೆ. ವಾಸುದೇವ ನಾಯಕ ಅವರು ಪ್ರೊ. ಬಿ.ಇ. ರಂಗಸ್ವಾಮಿ ಹಾಗೂ ಪ್ರೊ. ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಮೌಲ್ಯವರ್ಧಿತ ಮತ್ತು ಆಪ್ಟಿಮೈಜ್ಡ್ ಟ್ರಾನ್ಸ್‌ಎಸ್ಟೆರಿಫಿಕೇಶನ್ ಪ್ರಕ್ರಿಯೆಯ ಮೂಲಕ ಕೋಳಿ ಸಾಕಾಣೆಯ ತ್ಯಾಜ್ಯದಿಂದ ಜೈವಿಕ ಇಂಧನ ಉತ್ಪಾದನೆ ಮತ್ತು ಪರ್ಯಾಯ ಇಂಧನ ಸಂಪತ್ತಾಗಿ ಅದರ ಪರಿಣಾಮಕಾರಿ ಅನುಷ್ಠಾನ’ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಈ ಪದವಿ ನೀಡಲಾಗಿದೆ.
ವಾಸುದೇವ ನಾಯಕ ಅವರಿಗೆ ಪಿಹೆಚ್‌ಡಿ
