ದಾಮ್‌ಕೋಸ್ ಅಧ್ಯಕ್ಷರಾಗಿ ಶಿವಕುಮಾರ್ ಪುನರಾಯ್ಕೆ

ದಾಮ್‌ಕೋಸ್ ಅಧ್ಯಕ್ಷರಾಗಿ  ಶಿವಕುಮಾರ್ ಪುನರಾಯ್ಕೆ

ದಾವಣಗೆರೆ, ಫೆ. 10- ದಾವಣಗೆರೆ ಅಡಿಕೆ ಅಭಿವೃದ್ಧಿ ಮತ್ತು ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತದ (ದಾಮ್‌ಕೋಸ್) ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬಿ.ಕೆ. ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ಹೆಚ್.ಜಿ. ಮಲ್ಲಿಕಾರ್ಜುನ್ ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ದಾಮ್‌ಕೋಸ್ ಆಡಳಿತ ಕಚೇರಿಯಲ್ಲಿ ಸೋಮ ವಾರ ಎಲ್ಲಾ 12 ನಿರ್ದೇಶಕರ ಸಮ್ಮುಖದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆ ಯಿತು. ದಾವಣಗೆರೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಮಂಜುಳಾ ಚುನಾವಣಾಧಿಕಾರಿಯಾಗಿದ್ದರು.

ಈ ವೇಳೆ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಜಯ್ಯಣ್ಣ, ಮಾಜಿ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಮಾಜಿ ನಿರ್ದೇಶಕರಾದ ಜಿ.ಸಿ.ವಾಮದೇವಪ್ಪ, ಎಂ.ಆರ್.ಮಂಜುನಾಥಯ್ಯ, ನಿರ್ದೇಶಕರಾದ ಕೆ.ಸುಧಾ, ಎ.ಜಿ.ವಿಮಲಾಕ್ಷಮ್ಮ, ಎಚ್.ಎಸ್ ಮಂಗಳಗೌರಮ್ಮ, ಜಿ.ಎಸ್.ಬಸವರಾಜ್, ಎಚ್.ಜಿ.ಮರುಳಸಿದ್ದಪ್ಪ, ಆರ್.ಜಿ.ನರೇಂದ್ರ, ಎಂ.ಎಸ್.ಮಲ್ಲಿಕಾರ್ಜುನ್‌, ಟಿ.ಎಂ.ಮುನಿಯಪ್ಪ, ಬಿ.ಬಸವರಾಜಯ್ಯ,ಕೆ.ಟಿ.ಮಹಾಂತಪ್ಪ, ಕಾರ್ಯದರ್ಶಿ ಶಿವಕುಮಾರ್, ಲಿಂಗರಾಜ್ ಇತರರಿದ್ದರು.

error: Content is protected !!