ಹೊನ್ನಾಳಿ : ಇಂದಿನಿಂದ ನಾಟಕ ಪ್ರರ್ದಶನ

ಹೊನ್ನಾಳಿ : ಇಂದಿನಿಂದ ನಾಟಕ ಪ್ರರ್ದಶನ

ಹೊನ್ನಾಳಿ ಅಭಿವ್ಯಕ್ತಿ ಮತ್ತು ಯುವಶಕ್ತಿ, ಹಿರೇಕಲ್ಮಠ ಚನ್ನಪ್ಪಸ್ವಾಮಿ ಜನ ಕಲ್ಯಾಣ ಸೇವಾ ಟ್ರಸ್ಟ್ ಆಶ್ರಯದಲ್ಲಿ ಇಂದಿನಿಂದ ಮೂರು ದಿನ  3 ಪ್ರತ್ಯೇಕ ನಾಟಕಗಳ ಉಚಿತ ಪ್ರರ್ದಶನ ಪ್ರತಿದಿನ ಸಂಜೆ 7 ಗಂಟೆಗೆ ಕನಕದಾಸ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಅಭಿವ್ಯಕ್ತಿ ಕಲಾ ಸಂಘದ ಕಾರ್ಯದರ್ಶಿ ಕತ್ತಿಗೆ ಲೋಕೇಶ್ ತಿಳಿಸಿದರು.

ಬಳ್ಳಾರಿ ಜಿಲ್ಲಾ ಸಿರಗುಪ್ಪ ತಾಲ್ಲೂಕಿನ ಸಿರಿಗೆರೆ ದಾತ್ರಿ ರಂಗ ಸಂಸ್ಥೆಯಿಂದ  ಇಂದು ಶ್ರೀ ಕೃಷ್ಠ ಸಂಧಾನ ನಗೆ ನಾಟಕ ಪ್ರರ್ದಶನ, ನಾಳೆ ಬುಧವಾರ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನ, ಗುರುವಾರ ಸರಸತಿಯಾಗಲೊಲ್ಲೆ ಎಂಬ ಪ್ರತ್ಯೇಕ 3 ನಾಟಕಗಳ ಪ್ರದರ್ಶನ ನಡೆಯಲಿದೆ. ಅಭಿವ್ಯಕ್ತಿ ಸಂಸ್ಥಾಪಕ ಸದಸ್ಯರಾದ ಪ್ರೇಮ್ ಕುಮಾರ ಬಂಡಿಗಡಿ, ಯುವಶಕ್ತಿ ಒಕ್ಕೂಟದ ಪಿ.ವಿ. ಚನ್ನಪ್ಪ, ಲಾಯರ್ ಚಂದ್ರಪ್ಪ, ನಾಗರಾಜ್, ಭೋಜ ಇನ್ನಿತರರಿದ್ದರು. 

error: Content is protected !!