ಹರಿಹರ, ಫೆ.3- ಸಾಲಬಾಧೆ ತಾಳಲಾರದೆ ದೀಟೂರು ಗ್ರಾಮದ ರೈತನೊಬ್ಬನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ.
ಎಲ್.ಕೆ ಸುರೇಶ್ (42) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಸಾರಥಿ ಗ್ರಾಮದ ಯೂನಿಯನ್ ಬ್ಯಾಂಕಿನಲ್ಲಿ ಸುಮಾರು 21 ಲಕ್ಷ ರೂ. ಸಾಲ ಪಡೆದಿದ್ದು, ಜೊತೆಗೆ ಇತರೆಡೆ ಸೇರಿದಂತೆ ಒಟ್ಟು ಮೂವತ್ತು ಲಕ್ಷ ರೂ.ಸಾಲ ಪಡೆದಿದ್ದು, ಆದರೆ ಇತ್ತೀಚಿನ ಮಳೆಯ ಪ್ರಮಾಣ ಏರುಪೇರು ಆಗಿ ಜಮೀನಿನಲ್ಲಿ ಲಾಭ ಗಳಿಸಲು ಆಗದೇ ಇರುವುದರಿಂದ ನಿನ್ನೆ ರಾತ್ರಿ ಮನೆಯಲ್ಲಿ ವೇಲ್ ನಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಈತನಿಗೆ ಒಂದು ಗಂಡು, ಎರಡು ಹೆಣ್ಣು ಮಕ್ಕಳಿದ್ದಾರೆ.
ಬ್ಯಾಂಕ್ ಸಾಲ ತೀರಿಸಲು ಆಗದೇ ಚಿಂತೆಯಲ್ಲಿಯೇ ಜಿಗುಪ್ಸೆ ಗೊಂಡು ನೇಣು ಬಿಗಿದು ಮೃತಪಟ್ಟಿರುತ್ತಾನೆ ಎಂದು ಸುರೇಶ್ ಪತ್ನಿ ಎಲ್.ಎಸ್. ಕಲ್ಪನಾ ದೂರು ನೀಡಿದ ಮೇರೆಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.