ನಗರದಲ್ಲಿ ಫುಟ್ಬಾಲ್ ಕ್ರಾಂತಿ : ದಿನೇಶ್ ಕೆ. ಶೆಟ್ಟಿ
ದಾವಣಗೆರೆ, ಫೆ.3- ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕ್ರೀಡೆಗಳ ಮೂಲಕ ಶಾಲಾ ಬಾಲಕಿಯರ ಸಬಲೀಕರಣಕ್ಕಾಗಿ ಖೇಲೋ ಇಂಡಿಯಾ ಅಡಿಯಲ್ಲಿ ನಗರದ ಲೂಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ನಡೆದ ರಾಜ್ಯಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾವಳಿಯಲ್ಲಿ ಬೆಳಗಾಂ ನ ರೇಣುಕಾ ಫುಟ್ಬಾಲ್ ಕ್ಲಬ್ ತಂಡ ಹಾವೇರಿಯ ಡಿ ಯುನೈಟೆಡ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ, ಫುಟ್ಬಾಲ್ ತಂಡದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಪ್ರಶಸ್ತಿ ವಿತರಿಸಿ ಮಾತನಾಡಿ, ದಾವಣಗೆರೆಯಲ್ಲಿ ಮಹಿಳಾ ಫುಟ್ಬಾಲ್ ಪಂದ್ಯಾವಳಿ ಒಂದು ತಿಂಗಳ ಕಾಲ ಯಶಸ್ವಿಯಾಗಿ ನಡೆದು ದಾವಣಗೆರೆಯಲ್ಲಿ ಫುಟ್ಬಾಲ್ ಕ್ರಾಂತಿ ಎಬ್ಬಿಸಿದೆ. ಇದೇ ರೀತಿ ಇನ್ನು ಮುಂದೆ ರಾಷ್ಟ್ರಮಟ್ಟದ ಪಂದ್ಯಾವಳಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದರು.
ಇನ್ನು ಹೆಚ್ಚು ಹೆಚ್ಚು ಪಂದ್ಯಾವಳಿಗಳನ್ನು ನಡೆಸಿದರೆ ಉತ್ತಮ ಸ್ಪರ್ಧಿಗಳು ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಹಾವೇರಿಯ ಡಿ ಯುನೈಟೆಡ್ ತಂಡ ರನ್ನರ್ ಅಪ್ ಎರಡನೇ ಸ್ಥಾನ, ಕರುನಾಡು ಫುಟ್ಬಾಲ್ ತಂಡ ಮೂರನೇ ಸ್ಥಾನವನ್ನು ಪಡೆದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಗಳಾದ ಮಹಮ್ಮದ್ ರಫೀಕ್, ಚಂದ್ರಶೇಖರ ಎಸ್ಕೆ, ಅಹಮದ್ ಮುಜ್ತಬಾ ಅಶ್ರಫ್ ಅಲಿ, ಅಲ್ಲಾಬಕ್ಷಿ, ಡಿ.ಎಸ್. ಯುವರಾಜ್, ತನ್ವೀರ್, ಮುಜ್ತಬಾ ಶೇಖ್ ಸಬ್ರೀನ್, ಪ್ರವೀಣ್ ,ಜೆಫ್ ಫ್ರಾನ್ಸಿಸ್ ಮುಬಾರಕ್, ಮುಸ್ತಾಫಾ, ಚೇತನ್ ಕುಮಾರ್ ಮುಂತಾದವರಿದ್ದರು.