ಹರಪನಹಳ್ಳಿ, ಜ.2- ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಬೆಳಗ್ಗೆ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.
ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ. ಹಾಲೇಶ್, ಉಪಾಧ್ಯಕ್ಷೆ ರೇವತಿ, ಸದಸ್ಯ ರಾದ ಟಿ. ಯೋಗೇಶ್, ಸಿದ್ದಲಿಂಗಪ್ಪ, ವೆಂಕಟೇಶ್, ರಾಮಪ್ಪ, ನಾಮನಿರ್ದೇಶಕ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಲಚ್ಚಿಬಾಯಿ ಗುಡ್ಡೆ ನಾಯ್ಕ, ಉಪಾಧ್ಯಕ್ಷೆ ಹನುಮಕ್ಕ ಭೂತಪ್ಪ, ಸದಸ್ಯರಾದ ಎಸ್.ಎನ್. ಮಂಜುನಾಥ್ ಕಾರಬಾರಿ, ರಾಜ ನಾಯಕ್, ಕೆ.ಹೆಚ್ ಕುಬೇಂದ್ರಪ್ಪ, ರೂಪ ನಾಗರಾಜ್, ಟಿ. ಶೇಖರಪ್ಪ, ಇ. ಪಕ್ಕೀರಪ್ಪ, ಹೆಚ್. ನಾಗರಾಜ, ಎಂ. ಮಲ್ಲೇಶಪ್ಪ, ಟಿ.ಪಿ ಹನುಮಂತಪ್ಪ, ಎಂ. ಪ್ರವೀಣ್ ಕುಮಾರ್, ಟಿ.ಇ ಫಕ್ಕೀರಾಜ್, ಬಿಸಿ ಊಟ ಹಾಗೂ ಶಾಲಾ ಸಿಬ್ಬಂದಿ ಇದ್ದರು.