ಕೃಷಿಕ ಸಮಾಜದ ಅಧ್ಯಕ್ಷರಾಗಿ ದೊಡ್ಡಮನಿ ನಾಗೇಶ್

ಕೃಷಿಕ ಸಮಾಜದ ಅಧ್ಯಕ್ಷರಾಗಿ ದೊಡ್ಡಮನಿ ನಾಗೇಶ್

ಕೊಟ್ಟೂರು, ಜ.1- ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ನಿನ್ನೆ ನಡೆದ ಕೃಷಿಕ ಸಮಾಜದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ದೊಡ್ಡಮನಿ ನಾಗೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕೆ. ಕೊಟ್ರೇಶ್, ಖಜಾಂಚಿ ಜೆ. ಅಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸಾಬುಲಿ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ಜೆ. ಮರಳು ಸಿದ್ದಪ್ಪ ಆಯ್ಕೆಯಾಗಿದ್ದಾರೆ ಎಂದು ಇಲಾಖೆಯ ಕೃಷಿ ಅಧಿಕಾರಿ ಡಿ. ಶ್ಯಾಮಸುಂದರ ಘೋಷಿಸಿದರು.

error: Content is protected !!