ದಾವಣಗೆರೆ, ಜ. 1- ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳಿಯ ವತಿಯಿಂದ ನಗರದ ಮಹಾರಾಜಪೇಟೆಯ ಶ್ರೀ ವಿಠಲ ರುಕುಮಾಯಿ ದೇವಸ್ಥಾನದಲ್ಲಿ 6ನೇ ವರ್ಷದ ಶ್ರೀ ವಿಠ್ಠಲ ರುಕುಮಾಯಿ ದೇವರ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ 2025ನೇ ಇಸ್ವಿಯ 1000 ಕ್ಯಾಲೆಂಡರ್‌ಗಳನ್ನು ದೈವ ಮಂಡಳಿಯ ಅಧ್ಯಕ್ಷ ರಘು ಮೊಸಳೆ, ಭಜನಾ ಮಂಡಳಿಯ ಅಧ್ಯಕ್ಷ ನಿಂಗಸ್ವಾಮಿ ಖಮಿತ್ಕರ್ ಮತ್ತು ತರುಣ ಮಂಡಳಿ ಅಧ್ಯಕ್ಷ ವಿನಾಯಕ್ ಟಿಕಾರೆ ಹಾಗೂ ಇತರೆ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರಿಂದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ನಗರದ ಶ್ರೀ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
![14 vittala 02.01.2025 ನಗರದ ಶ್ರೀ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ](https://janathavani.com/wp-content/uploads/2025/01/14-vittala-02.01.2025-860x571.jpg)