ದಾವಣಗೆರೆ, ಡಿ. 29 – ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ 2025ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಭಿಮಾನಿ ಪ್ರಕಟಿಸಿರುವ ನೂತನ ವರ್ಷದ ಕ್ಯಾಲೆಂಡರ್ ಅನ್ನು ತಮ್ಮ ಗೃಹ ಕಚೇರಿಯಲ್ಲಿ ಅನಾವರಣ ಮಾಡಿ ನಾಡಿನ ಜನತೆಗೆ ನೂತನ ವರ್ಷದ ಶುಭಾಶಯ ಗಳನ್ನು ಕೋರಿದರು.
ನೂತನ 2025ರ ಹೊಸ ವರ್ಷವು ನಾಡಿನ ಜನತೆಗೆ ಹಾಗೂ ದಾವಣಗೆರೆ ಜಿಲ್ಲೆಯ ಜನತೆಗೆ, ರೈತರಿಗೆ, ಸರ್ವರಿಗೂ ಒಳಿತನ್ನು ತರಲಿ, ಸುಖ, ಸಂತೋಷ, ಸಮೃದ್ಧ ವಾತಾವರಣ ಸೃಷ್ಟಿಯನ್ನುಂಟು ಮಾಡಲಿ ಎಂದು ಸಚಿವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಯುವ ಮುಖಂಡ ಸಮರ್ಥ್ ಶಾಮನೂರು, ಬಾಪೂಜಿ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ. ಸಂಪನ್ನ ಮುತಾಲಿಕ್, ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮಾಗಾನಹಳ್ಳಿ ಪರಶುರಾಮ್, ವೀರೇಶ್ ಪಾಟೀಲ್, ಬೂದಾಳ್ ಬಾಬು, ಸೇರಿದಂತೆ ಇತರರು ಉಪಸ್ಥಿತರಿದ್ದರು.