ದಾವಣಗೆರೆ, ಡಿ. 29 – ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮದ ಹಾಗೂ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯ ಹೊನ್ನೂರು ಗೊಲ್ಲರಹಟ್ಟಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಯಾಗಿ ಭಾಗವಹಿಸಿದ್ದ ಚಿತ್ರದುರ್ಗ ಇಂಡಸ್ಟ್ರೀಸ್ ಸೆಂಟರ್‌ನ ಜಾಯಿಂಟ್ ಡೈರೆಕ್ಟರ್ ಬಿ. ಆನಂದ್ ಉಪಸ್ಥಿತರಿದ್ದು ಮಾತನಾಡಿ, ಮಕ್ಕಳ ಅಭಿರುಚಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ನೀಡಬೇಕೆಂದು ಎಂದು ಪೋಷಕರಿಗೆ ಸಲಹೆ ನೀಡಿದರು.
ಶಾಲೆಯ ಪೋಷಕ ಆರ್.ಎಸ್. ಶೇಖರಪ್ಪ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ಹುಲ್ಲುಮನೆ ರಾಮಪ್ಪ ಭೀಮಪ್ಪ ಬಂಗಾರದ ಪದಕವನ್ನು ಈ ಬಾರಿ ಕೆ.ಎಸ್. ತೇಜಸ್ವಿನಿ ಅವರಿಗೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಕೈಬಿಟ್ಟು ಶ್ರದ್ಧೆ, ನಿಷ್ಠೆಯಿಂದ ಅಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್. ಅನಿಲ್‌ಕುಮಾರ್, ಖಜಾಂಚಿ ಪ್ರವೀಣ್ ಹುಲ್ಲುಮನೆ,
ವಿದ್ಯಾಸಂಸ್ಥೆಯ ನಿರ್ದೇಶಕ ಟಿ.ಎಂ. ಗಿರೀಶ್ ಉಪಸ್ಥಿತರಿದರು.
ಪ್ರಾಂಶುಪಾಲರಾದ ಪ್ರೀತಾ ಟಿ. ರೈ ಹಾಗೂ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯ ಹೊನ್ನೂರು ಗೊಲ್ಲರಹಟ್ಟಿ ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ, ಸಂಯೋಜಕರಾದ ಎಸ್.ಎಂ. ರೂಪಾ, ಪ್ರಾಂಶುಪಾಲ ಸೈಯದ್ ಆರಿಫ್ ಆರ್., ಉಪ ಪ್ರಾಂಶುಪಾಲರಾದ ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.