ನ್ಯಾಮತಿ, ಡಿ. 19 – ತಾಲ್ಲೂಕಿನ ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕವಿತ ಜಗದೀಶ್, ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂಕುವ ಗ್ರಾಮ ಪಂಚಾಯಿತಿಯಲ್ಲಿ 10 ಸದಸ್ಯರ ಬಲವನ್ನು ಹೊಂದಿದ್ದು, ಈ ಹಿಂದಿನ ಅಧ್ಯಕ್ಷ ಚಂದನ್ ರಾಜೀನಾಮೆಯಿಂದ ತೆರವಾಗಿದ್ದ ಸಾಮಾನ್ಯ ಸ್ಥಾನ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಕವಿತ ಜಗದೀಶ್, ಚಂದ್ರಮ್ಮ ಮಂಜಪ್ಪ ಇಬ್ಬರು ನಾಮಪತ್ರ ಸಲ್ಲಿಸಿದ್ದರೂ, ಆದರೆ ಕೊನೇ ಘಳಿಗೆಯಲ್ಲಿ ಚಂದ್ರಮ್ಮ ಮಂಜಪ್ಪ ನಾಮಪತ್ರ ವಾಪಸ್ಸ್ ಪಡೆದ ಹಿನ್ನೆಲೆಯಲ್ಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮ್ಮ ಬಸವಣ್ಯಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದ ಇವರ ಅಯ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಣುಮಪ್ಪ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಮ್ಮ ಜೀವೇಶಪ್ಪ , ತಿಮ್ಮಪ್ಪ , ಸಿ.ಶಿವು , ಪಿ.ಶೃತಿ , ಕೆ.ಎಂ.ಬಸವರಾಜ , ಎಂ.ಎಸ್.ಮಂಜೇಶ್ , ಜಿ.ಎಸ್.ಚಂದನ್ , ಚಂದಮ್ಮ ಇದ್ದರು. ಪಿಡಿಒ ಎಂ.ಜಯಪ್ಪ ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಇದ್ದರು.