ದಾವಣಗೆರೆ, ಡಿ. 4 – ಸಾಫ್ಟ್‍ವೇರ್ ದಿಗ್ಗಜ ಬೆಂಗಳೂ ರಿನ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಇಂದಿನಿಂದ ಆರಂಭಗೊ ಳ್ಳಲಿರುವ 2 ದಿನಗಳ ಯುಕೆ-ಭಾರತ ಸಹಕಾರ-ಸಂವಾದ ಚರ್ಚೆಯಲ್ಲಿ ಭಾಗವಹಿಸಲು ದಾವಣಗೆರೆಯ ಐಡಾ ಲವ್ಲೇಸ್ ಸಾಫ್ಟ್ವೇರ್ ಕಂಪನಿಗೆ ಆಹ್ವಾನ ನೀಡಲಾಗಿದೆ ಎಂದು ಕಂಪನಿಯ ನಿರ್ದೇಶಕರಾದ ಎಲ್. ಶಿಲ್ಪಾ ತಿಳಿಸಿದ್ದಾರೆ. ಸಮಾನ ಮತ್ತು ಆಧಾರ ರಹಿತ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪರಿಹಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ನೈಜ ಪ್ರಪಂಚದ ಸಮಸ್ಯೆ ಗಳನ್ನು ಪರಿಹರಿಸಲು ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವ ಕಾರ್ಯಾಗಾರ ದಲ್ಲಿ ಚರ್ಚೆ-ಸಂವಾದಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
ಐಡಾ ಲವ್ಲೇಸ್ ಸಾಫ್ಟ್ವೇರ್ ಕಂಪನಿಗೆ ಈ ವರ್ಷದ ಆರಂಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೊಡ್ಡ ಮೊತ್ತದ ಅನುದಾನ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶಿಲ್ಪಾ ಪುರಸ್ಕಾರ ಸ್ವೀಕರಿಸಿದ್ದರು.