ತಾಲ್ಲೂಕು ಕಸಾಪ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಕುರುಬರ ಕೇರಿ, ಕಾಳಿಕಾದೇವಿ ರಸ್ತೆಯಲ್ಲಿನ ಪದ್ಮಭೂಷಣ ಡಾ|| ರಾಜಕುಮಾರ್ ಪ್ರೌಢಶಾಲೆ ಆವರಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಜಿ.ಪಂ.ನ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶಪ್ಪ ದೊಡ್ಡಮನಿ ಉಪನ್ಯಾಸ ನೀಡಲಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ ಸಾರಂಗಮಠದ ಗುರುಬಸವರಾಜೇಂದ್ರ ಅಧ್ಯಕ್ಷತೆ ವಹಿಸುವರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ನಿರ್ದೇಶಕರಾದ ಶ್ರೀಮತಿ ಪರಿಮಳ ಜಗದೀಶ್, ಶ್ರೀಮತಿ ಕೆ.ಜಿ. ಸೌಭಾಗ್ಯ, ರಟ್ಟಿಹಳ್ಳಿ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ತಾ|| ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ದತ್ತಿ ದಾನಿಗಳು: ಶ್ರೀಮತಿ ನಾರಾಯಣಮ್ಮ ಕೆಂಪರೆಡ್ಡಿ ಸ್ಮಾರಕ, ಶ್ರೀ ಅಮರನಾರಾಯಣ ಬೆಂಗಳೂರು, ಆನೆಕೊಂಡದ ರೇವಕ್ಕಳ ಲಕ್ಕಮ್ಮ ಎ.ಆರ್. ಬಸಪ್ಪ, ಶ್ರೀಮತಿ ನಾಗಮ್ಮ ಉಜ್ಜನಪ್ಪ ಎ.ಆರ್., ದಾವಣಗೆರೆ, ಸಂಗನಬಸವ ನೆಶ್ವಿ, ವಿದ್ಯಾನಗರ, ದಾವಣಗೆರೆ.