ನೇತ್ರ ಸೊಸೈಟಿ ರಾಜ್ಯಾಧ್ಯಕ್ಷರಾಗಿ ಡಾ. ರವೀಂದ್ರ

ನೇತ್ರ ಸೊಸೈಟಿ ರಾಜ್ಯಾಧ್ಯಕ್ಷರಾಗಿ ಡಾ. ರವೀಂದ್ರ

ದಾವಣಗೆರೆ, ಡಿ. 4- ಕರ್ನಾಟಕ ನೇತ್ರ ಸೊಸೈಟಿ ರಾಜ್ಯಾಧ್ಯಕ್ಷರಾಗಿ ನಗರದ ಹಿರಿಯ ನೇತ್ರ ತಜ್ಞ ಡಾ. ರವೀಂದ್ರ ಬಣಕಾರ್ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ನೇತ್ರ ಸೊಸೈಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ನೇತ್ರ ಸೊಸೈಟಿ ಸಹಯೋಗದಲ್ಲಿ ಕುಂದಾ ಪುರದಲ್ಲಿ ನಿನ್ನೆ ಏರ್ಪಾಡಾ ಗಿದ್ದ ರಾಜ್ಯ ನೇತ್ರ ತಜ್ಞರ ಸಮ್ಮೇಳನದ ಸಂದರ್ಭದಲ್ಲಿ ನಡೆದ ಸಂಸ್ಥೆಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಪುರಸ್ಕಾರ: ಸಮ್ಮೇಳನದಲ್ಲಿ ಕೊಡಮಾಡುವ ಪುರಸ್ಕಾರಕ್ಕೆ ಸ್ನಾತಕೋತ್ತರ ಪದವೀಧರರಾದ ಡಾ. ವರ್ಷ ವಿಲ್ಸನ್ (ಬೆಂಗಳೂರು) ಮತ್ತು ಡಾ. ಶ್ರೇಯಸ್ ನಲವಾಡ (ಬೆಳಗಾಂ) ಭಾಜನರಾಗಿದ್ದಾರೆ.

ಡಾ. ವರ್ಷ ವಿಲ್ಸನ್ ಅವರು ಅತ್ಯುತ್ತಮ ಪ್ರಬಂಧ ಮಂಡಿಸಿದ್ದು, ಅವರಿಗೆ ದಾವಣಗೆರೆಯ ನೇತ್ರ ತಜ್ಞ ಡಾ. ಬಿ.ಹೆಚ್. ಮಂಜುನಾಥ್ ಮಾರ್ಗದರ್ಶನ ನೀಡಿದ್ದಾರೆ. ಡಾ. ಶ್ರೇಯಸ್ ನಲವಾಡ್ ಅವರು ಟೀಚರ್ಸ್ ಆಫ್ ಟುಮಾರೋ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದಿದ್ದು ಅವರಿಗೆ ದಾವಣಗೆರೆಯ ನೇತ್ರ ತಜ್ಞ ಡಾ. ಎ.ಆರ್. ಸುರೇಶ್ ಮಾರ್ಗದರ್ಶನ ಮಾಡಿದ್ದರು.

ದಾವಣಗೆರೆಯಲ್ಲಿ ನೇತ್ರ ಸಮ್ಮೇಳನ : ಬರುವ 2025ನೇ ಸಾಲಿನ ಕರ್ನಾಟಕ ನೇತ್ರ ತಜ್ಞರ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲು ಸಮ್ಮೇಳನದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ರವೀಂದ್ರ ಬಣಕಾರ್ ವಹಿಸಲಿದ್ದಾರೆ.

error: Content is protected !!