ದಾವಣಗೆರೆ, ಸೆ. 29 – ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆಯ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ದಾವಣಗೆರೆ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ನಗರದ ಸ್ವಚ್ಛತೆಯ ಬಗ್ಗೆ ಇಂದು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಸೈಕಲ್ ಜಾಥಾ ಕಾರ್ಯಕ್ರಮವನ್ನು ಡಾ. ಎಂ.ಸಿ. ಮೋದಿ ವೃತ್ತದಿಂದ ಪ್ರಾರಂಭಿಸಿ ವಿದ್ಯಾರ್ಥಿ ಭವನ, ಜಯದೇವ ಸರ್ಕಲ್ ಮಹಾನಗರ ಪಾಲಿಕೆ, ಅರುಣಾ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಕ್ಲಾಕ್ ಟವರ್ ಸರ್ಕಲ್ ಮೂಲಕ ಆಫೀಸರ್ ಕ್ಲಬ್‌ವರೆಗೂ ನಡೆಸಲಾಯಿತು.
ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ನೂತನ ಮೇಯರ್ ಚಮನ್ ಸಾಬ್ ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ದಾವಣಗೆರೆ ಬೈಸಿಕಲ್ ಕ್ಲಬ್‌ನ ಅಧ್ಯಕ್ಷ ಟಿ.ಎಂ. ರಾಜೇಂದ್ರ ಕುಮಾರ್ ಕಾರ್ಯದರ್ಶಿ ಕೆ.ಎಸ್. ಮಹೇಶ್, ಸಂಘದ ನಿರ್ದೇಶಕ ಕಿರಣ್ ಬಾಳೆಹೊಲದ, ಪ್ರಸಾದ್ ಅರ್ಚಿಸ್, ಎನ್.ಕೆ. ಕೊಟ್ರೇಶ್, ಹರೀಶ್ ಕೆ.ಆರ್. ಡಾ. ಮಾಲ್ತೇಶ್ ವಿಜಯ ಭಟ್, ನಾಗರಾಜ್, ಅನಿಲ್, 38ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯ ಗಡಿಗುಡಾಳ್ ಮಂಜುನಾಥ್ ಮತ್ತು ನಗರದ ಸಂಚಾರಿ ಪೊಲೀಸ್ ಸಿಬ್ಬಂದಿ ವರ್ಗ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಇನ್ನು ಮುಂತಾದವರು ಸಹ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು.