ಮಲೇಬೆನ್ನೂರು, ಸೆ. 29 – ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ವತಿಯಿಂದ ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯಕ್ಕೆ ಶನಿವಾರ ಗಂಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಭಾರತಿ ಕಟಿಗೇರ, ಉಪಾಧ್ಯಕ್ಷೆ ಶ್ರೀಮತಿ ಗೀತಾ ಸಂಜೀವ ರೆಡ್ಡಿ, ಸದಸ್ಯರಾದ ಕರಿಬಸಮ್ಮ, ಜಯಮ್ಮ, ಕೆಂಚವೀರಯ್ಯ, ಹೇಮಪ್ಪ ಶಿವಣ್ಣನವರ, ಶಂಕರಪ್ಪ ಕಮದೋಡ, ರವಿಗೌಡ, ಪಿಡಿಓ ರಾಮಚಂದ್ರಪ್ಪ, ಸಿಬ್ಬಂದಿ ವರ್ಗದವರಾದ ಪ್ರಶಾಂತ, ಮಂಜಾನಾಯ್ಕ, ಅಶೋಕ, ಪ್ರಕಾಶ, ಜಗದೀಶ್, ಅಶೋಕ, ಮೈಲಪ್ಪ ಭಾಗವಹಿಸಿದ್ದರು.
October 9, 2024