ವಸಂತ ರಸ್ತೆಯ ಹಾಲೇಶ್ವರ ಪ್ರಿಂಟಿಂಗ್ ಪ್ರೆಸ್ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳು 12ನೇ ವರ್ಷದ ಮಹಾ ಮಂಡಲಾಭಿಷೇಕವು ಕಳೆದ ಜುಲೈ 17ರಿಂದ ಪ್ರಾರಂಭವಾಗಿದ್ದು, ಇಂದು ಕೊನೆಯ ದಿನವಾಗಿದ್ದು, ಬೆಳಗಿನ ಜಾವದಿಂದ ಅಮ್ಮನವರಿಗೆ ಮಹಾಪೂಜೆ, ಮಧ್ಯಾಹ್ನ 12.30 ರಿಂದ ಪ್ರಸಾದ ವಿನಿಯೋಗ ಇರುತ್ತದೆ ಎಂದು ಶ್ರೀ ಉತ್ಸವಾಂಬ ದೇವಿ ಭಕ್ತ ಮಂಡಳಿ ತಿಳಿಸಿದೆ.
January 11, 2025