ಮಲೆಬೆನ್ನೂರು, ಆ. 1- ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಜಾರಿಗೆೋಳಿಸಿರುವ ಜನಪರ ಕಾರ್ಯಕ್ರಮ ಗಳು ದೇಶಕ್ಕೇ ಮಾದರಿಯಾಗಿವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಬುಧವಾರ ಕೆೋಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ್ ಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೆೋಂಡಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡುವುದು ಶಿಕ್ಷಣ ಕಲಿಯಲಿ ಎಂಬ ಉದ್ದೇಶದಿಂದ ಎಂಬುದನ್ನು ಪೋಷಕರು ಅರ್ಥ ಮಾಡಿಕೆೋಳ್ಳಬೇಕು. ಪ್ರತಿಫಲ ಅಪೇಕ್ಷಿಸದೇ ಸೇವೆ ಸಲ್ಲಿಸುವವರು ಶಿಕ್ಷಕರು ಮಾತ್ರ. ಅಂತಹ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೆೋಳ್ಳಿ ಎಂದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಕಿವಿ ಮಾತು ಹೇಳಿದ ಮಂಜುನಾಥ್ ಅವರು, ಗ್ರಾಮೀಣ ಪ್ರದೇಶದಲ್ಲಿ ಓದಿದವರೇ ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷ 1,689 ವಿದ್ಯಾರ್ಥಿಗಳಿಗೆ ಮತ್ತು ಮಲೇಬೆನ್ನೂರು ಯೋಜನಾಧಿಕಾರಿ ಕಛೇರಿ ವ್ಯಾಪ್ತಿಯಲ್ಲಿ 140 ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಿಸಲಿದ್ದೇವೆ ಎಂದು ಎಂ. ಲಕ್ಷ್ಮಣ ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎ.ಎಸ್.ಪಿ ಶ್ರೀನಿವಾಸ್, ಪೊಲೀಸ್ ಸಿಬ್ಬಂದಿ ಸಂತೋಷ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ವೆಂಕಟರಾಮಾಂಜನೇಯ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜಿಗಳಿ ಪ್ರಕಾಶ್, ಕೆೋಕ್ಕನೂರಿನ ಹನುಮಂತರಾಯ, ಯೋಜ ನಾಧಿಕಾರಿ ವಸಂತ್, ಸಿ.ಎಸ್.ಇ ನೋಡಲ್ ಅಧಿಕಾರಿ ಚಿನ್ನಮೂರ್ತಿ, ಕಛೇರಿ ವ್ಯವಸ್ಥಾಪಕರಾದ ಐಶ್ವರ್ಯ, ವಲಯ ಮೇಲ್ವಿಚಾರಕರಾದ ರಕ್ಷಿತ, ರಂಜಿತ, ಸಂಪನ್ಮೂಲ ವ್ಯಕ್ತಿ ಸದಾನಂದ್, ಮುಖಂಡರಾದ ಕುಂಬಳೂರು ವಾಸು, ಮಲ್ಲನಾಯ್ಕನಹಳ್ಳಿ ಅಶೋಕ್ ಸೇರಿದಂತೆ ಇತರರು ಭಾಗವಹಿಸಿದ್ದರು.