ಮಲೇಬೆನ್ನೂರಿನಲ್ಲಿ ಸಂಭ್ರಮದ ಚೌಡಮ್ಮನ ಪರವು

ಮಲೇಬೆನ್ನೂರಿನಲ್ಲಿ ಸಂಭ್ರಮದ ಚೌಡಮ್ಮನ ಪರವು

ಮಲೇಬೆನ್ನೂರು ಪಟ್ಟಣದ ಆಶ್ರಯ ಕಾಲೋನಿ ಬಳಿಯ ಗುಡ್ಡದಲ್ಲಿರುವ ತೊಟ್ಟಿಲು ಆಲದ ಮರದ ಚೌಡಮ್ಮನ ಪರವು ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಸಂಭ್ರಮದೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು. ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ, ಆಷಾಢ ಮಾಸದಲ್ಲಿ ಆಚರಿಸುವ ಪರವು ಇದಾಗಿದ್ದು, ಇಲ್ಲಿನ ಭಾನುವಳ್ಳಿ ಮನೆತನದವರು ಊರಲ್ಲಿ ಪಟ್ಟಿ ಎತ್ತಿ ಈ ಪರವು ಅನ್ನು ಆಚರಿಸುತ್ತಾ ಬಂದಿದ್ದಾರೆ. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!