ಹೃದಯದ ಅನಾರೋಗ್ಯಕ್ಕೆ ಆಧುನಿಕ ಜೀವನ ಶೈಲಿಯೇ ಕಾರಣ

ಹೃದಯದ ಅನಾರೋಗ್ಯಕ್ಕೆ  ಆಧುನಿಕ ಜೀವನ ಶೈಲಿಯೇ ಕಾರಣ

ಮಹಾನಗರ ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್

ದಾವಣಗೆರೆ, ಜು.24 – ಒತ್ತಡದ ಜೀವನ ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿದೆ ಆದ್ದರಿಂದ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್ ಸಲಹೆ ನೀಡಿದರು.

ಎಸ್.ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್, ಜಯನಗರ ಸಿ’ ಬ್ಲಾಕ್ ನಾಗರೀಕ ಹಿತ ರಕ್ಷಣಾ ಸಮಿತಿ ಮತ್ತು ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಶಕ್ತಿ ನಗರದ ಭೀಷ್ಮ ವೃತ್ತದಲ್ಲಿನ ಎಸ್.ಎಂ. ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಿದ್ದ ರಕ್ತದೊತ್ತಡ, ಇಸಿಜಿ ಮತ್ತು ವೈದ್ಯರ ಸಮಾಲೋಚನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಾತ್ವಿಕ ಆಹಾರ ಸೇವನೆ, ಪ್ರತಿನಿತ್ಯ ನಿಯಮಿತ ನಡಿಗೆ ಮತ್ತು ವ್ಯಾಯಾಮದಂತಹ ಚಟುವಟಿಕೆ ಮಾಡಿದರೆ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯ ಡಾ. ರಾಕೇಶ್ ಮಾತನಾಡಿ, ಮಾನವನ ದೇಹದಲ್ಲಿ ಹೃದಯವು ಪ್ರಮುಖ ಅಂಗ ಆದ್ದರಿಂದ ಎದೆ ನೋವು ಕಾಣಿಸಿಕೊಂಡಾಗ ಭಯಕ್ಕೆ ತುತ್ತಾಗದೇ ತಕ್ಷಣವೇ ಸಂಬಂಧ ಪಟ್ಟ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ಹೃದಯಾಘಾತಕ್ಕೆ ಭಯವೇ ಮೂಲ ಕಾರಣ ಆದ್ದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಆರೋಗ್ಯದೊಂದಿಗೆ ಹೃದಯವಂತರಾಗುವ ಮೂಲಕ ಉತ್ತಮ ಸಮಾಜ ನಿರ್ಮಿಸೋಣ ಎಂದರು.

ಈ ವೇಳೆ ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ್, ಜಯನಗರ ಸಿ ಬ್ಲಾಕ್ ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಎನ್. ಬಿಕ್ಕೋಜಪ್ಪ, ನಾಗರಾಜ್, ಪಿ. ಅಂಜಿನಪ್ಪ, ಟಿ.ಇ. ರುದ್ರಪ್ಪ, ವೈ. ತಿಪ್ಪೇಸ್ವಾಮಿ ಶೆಟ್ರು, ಡಿ. ರವಿಕುಮಾರ್, ಪಿ.ಎಸ್. ನಾಗರಾಜ್, ಸುರೇಶ್ ಅಡ್ಲಿಗೆರೆ, ನಿಂಗಪ್ಪ ಇಟ್ಟಿಗಿ, ಮೈಲಾರಪ್ಪ, ಪತ್ರಕರ್ತ ಎಂ.ವೈ. ಸತೀಶ್, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎಸ್.ಜಿ. ಉಳವಯ್ಯ, ಕಾರ್ಯದರ್ಶಿ ಸಿ. ಅಜಯ್ ನಾರಾಯಣ್, ಖಜಾಂಚಿ ಎಸ್. ನಾಗರಾಜ್, ಸಹ ಕಾರ್ಯದರ್ಶಿ ಎಚ್.ಎಂ. ನಾಗರಾಜ್ ಮತ್ತು ಎಚ್.ಎನ್.ಶಿವಕುಮಾರ್ ಇತರರಿದ್ದರು.

error: Content is protected !!