ಮಲೇಬೆನ್ನೂರು, ಏ.25- ರಾಜ್ಯದಲ್ಲಿ ಮೇ 7 ರಂದು ಜರುಗಲಿರುವ 2ನೇ ಹಂತದ ಲೋಕಸಭಾ ಚುನಾವಣೆಗೆ ಪಟ್ಟಣದಲ್ಲಿರುವ 85 ವರ್ಷ ಮೇಲ್ಪಟ್ಟ ವೃದ್ದರು ಮತ್ತು ವಿಕಲಚೇತನರು ಗುರುವಾರ ಮನೆಯಿಂದಲೇ ಮತದಾನ ಮಾಡಿದರು. ಉಪ ತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್, ಸೆಕ್ಟರ್ ಆಫೀಸರ್ ಉಮೇಶ್, ರೆಹಮಾನ್ ಮತ್ತು ಬಿಎಲ್ಒ ಪರಮೇಶ್ವರಪ್ಪ, ಶಾರದಮ್ಮ ಹಾಗೂ ಮತಗಟ್ಟೆ ಸಿಬ್ಬಂದಿ ವರ್ಗದವರು ಈ ವೇಳೆ ಹಾಜರಿದ್ದರು. ಹಳ್ಳಿಗಳಲ್ಲಿರುವ ವೃದ್ಧರು ಮತ್ತು ವಿಕಲಚೇತನರೂ ಮನೆಯಿಂದಲೇ ಮತದಾನ ಮಾಡಿದರು.
November 26, 2024