ಜಿಲ್ಲಾ ಚುನಾವಣಾ ಮತದಾರರ ಜಾಗೃತಿ ಚಿಹ್ನೆಯಾಗಿ ಅಪರೂಪದ ತಳಿ ಬಯಲು ಸೀಮೆಯ `ಕೊಂಡುಕುರಿ’

ಜಿಲ್ಲಾ ಚುನಾವಣಾ ಮತದಾರರ ಜಾಗೃತಿ ಚಿಹ್ನೆಯಾಗಿ  ಅಪರೂಪದ ತಳಿ ಬಯಲು ಸೀಮೆಯ `ಕೊಂಡುಕುರಿ’

ದಾವಣಗೆರೆ, ಏ. 22 – 18ನೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕೆಂದು ಜಿಂಕೆಯ ತದ್ರೂಪ ಹೊಂದಿರುವ ಬಯಲು ಸೀಮೆಯ ಕೊಂಡುಕುರಿ ರಂಗಯ್ಯನದುರ್ಗ ಅರಣ್ಯದಲ್ಲಿ ಸಿಗುವ ನಗುಮೊಗದ ಪ್ರಾಣಿ ಕೊಂಡುಕುರಿ ರಂಗ ಈ ಬಾರಿಯ ಚುನಾವಣಾ ಜಾಗೃತಿಗೆ ಮ್ಯಾಸ್ಕಟ್ ಆಗಿ ಬಳಕೆ ಮಾಡಲಾಗಿದೆ. ಕೊಂಡುಕುರಿ ಓಟದ ತೇಜತೆಯ ರೀತಿಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಗುರಿ ಹೊಂದಿದೆ. 

ಮತದಾರರ ಜಾಗೃತಿ ಹೆಚ್ಚಿಸುವ ಮೂಲಕ ಮತದಾನವನ್ನು ದಾಖಲೆ  ಪ್ರಮಾಣದಲ್ಲಿ ಹೆಚ್ಚಿಸಬೇಕೆನ್ನುವ ಪ್ರಯತ್ನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ಪ್ರಮುಖ ಉದ್ದೇಶವಾಗಿದೆ.  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಜಾಗೃತಿ ಮ್ಯಾಸ್ಕಟ್ಟಿನ್ನು ನಿನ್ನೆ ಬಿಡುಗಡೆ ಮಾಡಲಾಯಿತು. 

ಈ ವೇಳೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾ ವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಚುನಾ ವಣಾ ವೀಕ್ಷಕರಾದ ಎಂ. ಲಕ್ಷ್ಮಿ, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಅಧ್ಯಕ್ಷ ಬಿ. ಸುರೇಶ್  ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 

ಕೊಂಡುಕುರಿಯ ವಿಶೇಷ; ಬಯಲುಸೀಮೆ ಜಗಳೂರು ತಾಲ್ಲೂಕು ರಂಗಯ್ಯನದುರ್ಗ ಅಭ ಯಾರಣ್ಯ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಜೀವ ವೈವಿಧ್ಯತೆಯ ನಾಲ್ಕು ಕೊಂಬಿನ ಕೊಂಡುಕುರಿ ಜಿಂಕೆಯಲ್ಲ, ಜಿಂಕೆಯಾಕಾರ ಹೊಂದಿದೆ. ಏಷ್ಯಾ ಖಂಡದಲ್ಲಿಯೇ ಅಪರೂಪದ ಜೀವಸಂಕುಲ ವಾಗಿದ್ದು, ನಾಚಿಕೆ ಸ್ವಭಾವದ್ದಾಗಿದೆ. ಇದರ ಸಂತತಿ ಯನ್ನು ಸಂರಕ್ಷಣೆ ಮಾಡಲು ರಂಗಯ್ಯನದುರ್ಗ ಅರಣ್ಯವನ್ನು ಮೀಸಲಿರಿಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿಯೇ ಅಪರೂಪವಾದ ಕೊಂಡುಕುರಿ, ಸೌಮ್ಯ ಪ್ರಾಣಿಗಳಲ್ಲಿ ಜಿಲ್ಲೆಯ ಐಕಾನ್ ಎಂದೇ ಕರೆಯಬಹುದಾಗಿದ್ದು ಚುನಾವಣೆ ಯಲ್ಲಿ ಜಿಲ್ಲೆಯ ಐಕಾನ್ ಆಗಿ ಚುನಾವಣಾ ಸೌಮ್ಯತೆ ಹೆಚ್ಚಿಸಬಹುದೆಂಬ ಸಂದೇಶದೊಂದಿಗೆ ಮ್ಯಾಸ್ಕಟ್ ಆಗಿ ಬಳಕೆ ಮಾಡಲಾಗಿದೆ ಎಂದು ಸ್ವೀಪ್ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ಅಭಿಪ್ರಾಯವಾಗಿದೆ.

error: Content is protected !!