ಬಾಪೂಜಿ ಆಸ್ಪತ್ರೆಯಲ್ಲಿ ಕೂದಲು ಉದುರುವಿಕೆ ತಡೆ ಕಾರ್ಯಾಗಾರ

ಬಾಪೂಜಿ ಆಸ್ಪತ್ರೆಯಲ್ಲಿ ಕೂದಲು ಉದುರುವಿಕೆ ತಡೆ ಕಾರ್ಯಾಗಾರ

ದಾವಣಗೆರೆ, ಏ. 21 – ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜು ಹಾಗೂ ಎಸ್.ಎಸ್.ಐ.ಎಂ.ಎಸ್ ಕಾಲೇಜು ಚರ್ಮರೋಗ ವಿಭಾಗದಿಂದ `ಹೇರ್ ಮೆಸೊಥೆರಪಿ’ (ಕೂದಲು ಉದುರುವಿಕೆ ತಡೆ) ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಜೆಜೆಎಂ ಮೆಡಿಕಲ್‌ ಕಾಲೇಜು ಪ್ರಾಂಶುಪಾಲ  ಡಾ. ಶುಕ್ಲಾಶೆಟ್ಟಿ ಕಾರ್ಯಾಕಾರ ಉದ್ಘಾಟಿಸಿದರು.

ಕೂದಲು ಉದುರುವಿಕೆಗೆ ವಿವಿಧ ಕಾರಣಗಳ ಬಗ್ಗೆ ಡಾ. ಮಧು ಎಂ. ಉಪನ್ಯಾಸ ನೀಡಿದರು. 

ಕೂದಲು ಪುನರ್‌ಸ್ಥಾಪನೆ ಕುರಿತು ಡಾ. ಅರ್ಪಿತಾ ಡಿ. ಪವಾಡ ಶೆಟ್ಟರ್ ಮಾತನಾಡಿದರು. 

ಚರ್ಮರೋಗ ವಿಭಾಗದ ಮುಖ್ಯಸ್ಥ  ಡಾ.ಸೂಗಾರೆಡ್ಡಿ, ಡಾ. ಬಿ.ಕೆ. ವಿಶ್ವನಾಥ್, ಡಾ. ನಾಡಿಗ ರಾಜಶೇಖರ್,  ಡಾ.ಮಂಗಳ ಎಚ್.ಸಿ.,  ಡಾ. ಲಿಂಗರಾಜ್ ಎಂ.ಎಂ., ಡಾ.ರೂಪ ಎಂ.ಸಿ.  ಡಾ. ಸೌಮ್ಯ ಮಾನಂಗಿ, ಡಾ.ರಶ್ಮಿ ಎ.ಬಿ., ಡಾ.ವಿನಯ್ ಡಿ.ಜಿ, ಡಾ.ಮಧು ಎಂ. ರವರ ನೇತೃತ್ವದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. 

ಚರ್ಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಗಳು, ಕಿರಿಯ ವ್ಯೆದ್ಯರುಗಳು ಭಾಗವಹಿಸಿದ್ದರು.

error: Content is protected !!