ಎಂಐ ವಿಂಗ್ಸ್ ಪ್ರಿ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಚಿಣ್ಣರ ಸಂಭ್ರಮ

ಎಂಐ ವಿಂಗ್ಸ್ ಪ್ರಿ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಚಿಣ್ಣರ ಸಂಭ್ರಮ

ದಾವಣಗೆರೆ, ಏ. 3 – ನಗರದ ವನಿತಾ ಸಮಾಜದ ಸಭಾಂಗಣದಲ್ಲಿ ನಿನ್ನೆ ನಡೆದ ಎಂ.ಐ. ವಿಂಗ್ಸ್ ಶಾಲಾ ವಾರ್ಷಿಕೋತ್ಸವದಲ್ಲಿ ಚಿಣ್ಣರು ಕುಣಿದು ಕುಪ್ಪಳಿಸಿದರು. 

ಮಕ್ಕಳ ನೃತ್ಯ ಪ್ರದರ್ಶನಗಳು, ಹಾಡು, ಭಾಷಣ ಪ್ರೇಕ್ಷಕರಿಗೆ ಮುದವನ್ನು ತಂದಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾವಣಗೆರೆ ದಕ್ಷಿಣ ಬಿಇಓ  ಪುಷ್ಪಲತಾ ಅವರು ಶಾಲೆಯ ವಿಭಿನ್ನವಾದ ಪರಿಕಲ್ಪನೆಯನ್ನು ಪ್ರಶಂಶಿಸಿದರಲ್ಲದೇ, ಪೋಷಕರಿಗೆ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಛಾಯಾ ಕೆ.ಎ. ಮಕ್ಕಳ ಆರೋಗ್ಯವನ್ನು ಕಾಪಾಡುವುದರ ಬಗ್ಗೆ ಪೋಷಕರಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟರು. ಶಾಲೆಯ ಸಂಸ್ಥಾಪಕರಾದ ಶ್ರೀಮತಿ ದೀಪ ಎನ್.ರಾವ್ ಪ್ರತಿಯೊಂದು ಮಕ್ಕಳ ಮಲ್ಟಿಪಲ್ ಇಂಟಲಿಜೆನ್ಸ್‌ನಲ್ಲಿ ಉಂಟಾದ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಶಾಲೆಯ ನಿರ್ದೇಶಕ ವೆಂಕಟೇಶ ಬಿ.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!