ಅಧ್ಯಾಪಕರುಗಳಿಗೆ `ಪ್ರೋಸೆಸ್ ಮೈನಿಂಗ್’ ತರಬೇತಿ

ಅಧ್ಯಾಪಕರುಗಳಿಗೆ `ಪ್ರೋಸೆಸ್ ಮೈನಿಂಗ್’ ತರಬೇತಿ

ದಾವಣಗೆರೆ, ಏ. 3 – ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಮೂರು ದಿನಗಳ `ಪ್ರೊಸೆಸ್ ಮೈನಿಂಗ್’ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. 

ಈ ತರಬೇತಿ ಕಾರ್ಯಕ್ರಮವನ್ನು ಐಸಿಟಿ ಅಕ್ಯಾಡೆಮಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ತರಬೇತಿ ಕಾರ್ಯಕ್ರಮವನ್ನು ಐಸಿಟಿ ಅಕ್ಯಾಡೆಮಿ (ಬೆಂಗಳೂರು) ಇವರ ಸಹಯೋಗದಲ್ಲಿ ಆಯೋಜಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ನುರಿತ ತರಬೇತುದಾರ  ಜಿ.ಸಿ. ಮಂಜುನಾಥ್ ನಡೆಸಿಕೊಡುವರೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ.ಎನ್. ವೀರಪ್ಪ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಮಾತನಾಡಿ, ಈ ತರಬೇತಿ ಕಾರ್ಯಕ್ರಮದ ಮೂಲಕ, ನಮ್ಮ ಅಧ್ಯಾಪಕರು ಪ್ರೋಸೆಸ್ ಮೈನಿಂಗ್ ಪ್ರಕ್ರಿಯೆಯ ತತ್ವಗಳು ಮತ್ತು ತಂತ್ರಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಕು. ಚಂದನ ನೆರವೇರಿಸಿಕೊಟ್ಟರು. ವಂದನಾರ್ಪಣೆಯನ್ನು ವಿದ್ಯಾರ್ಥಿನಿ ಕು. ಅಕ್ಷತ ನಡೆಸಿಕೊಟ್ಟರು.  

ಕಾರ್ಯಕ್ರಮದಲ್ಲಿ ಐಸಿಟಿ ಅಕ್ಯಾಡೆಮಿ ದಾವಣಗೆರೆ ವಿಭಾಗದ ಸಂಯೋಜಕ ಜಕಾವುಲ್ಲ, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರಧ್ಯಾಪಕರುಗಳಾದ ಪ್ರೊ. ಜಿ. ನಂದಿತ ಮತ್ತು ಪ್ರೊ. ಬಿ.ಪಿ. ದೀಪು ಹಾಗೂ  ಇತರರು ಪಾಲ್ಗೊಂಡಿದ್ದರು.

error: Content is protected !!