ಚಳ್ಳಕೆರೆ, ಏ. 2- ಇಲ್ಲಿನ ತಾಲ್ಲೂಕು ವೀರಶೈವ ಬಳಗದ ವತಿಯಿಂದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 117ನೇ ಜನ್ಮ ದಿನಾಚರಣೆ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಶೈವ ತಾಲ್ಲೂಕು ಉಪಾಧ್ಯಕ್ಷ ಕೆ.ಎಂ. ಜಗದೀಶ್, ವೀರಶೈವ ಮುಖಂಡ ಡಿ.ಎಂ.ಟಿ. ಕಿರಣ್ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು. ಆನಂದ, ಇಂದುಶೇಖರ್, ಕೆ.ಎಂ. ಯತೀಶ್, ಟಿ. ರಾಜು, ಎನ್.ಟಿ. ತಿಪ್ಪೇಸ್ವಾಮಿ, ಹೆಚ್.ಡಿ. ಶಿವಕುಮಾರ್ ಮತ್ತಿತರೆ ವೀರಶೈವ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
December 27, 2024