ಕುಂದೂರು : ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

ಕುಂದೂರು : ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

ರಥೋತ್ಸವದ ಹಿನ್ನೆಲೆಯಲ್ಲಿ ಚಿತ್ತಾಕರ್ಷಕ ಬಣ್ಣಗಳಿಂದ ಕಂಗೊಳಿಸುತ್ತಿರುವ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಗೋಪುರ.

ಹೊನ್ನಾಳಿ, ಏ. 2 – ತಾಲ್ಲೂಕಿನ ಕುಂದೂರು ಗ್ರಾಮದ ಮೇಜರ್ ಮುಜರಾಯಿ ಇಲಾಖೆಯ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ನಾಡಿದ್ದು ದಿನಾಂಕ 4ರ ಗುರುವಾರ ಮಧ್ಯಾಹ್ನ 12 ರಿಂದ 1 ರವರೆಗೆ ಜರುಗುವುದು. 

ದಿನಾಂಕ 5ರ ಶುಕ್ರವಾರ ಬೆಳಗಿನ ಜಾವ 4ಕ್ಕೆ ಶ್ರೀ ಸ್ವಾಮಿಯ ಮಹಾ ರಥೋತ್ಸವ, ಮಧ್ಯಾಹ್ನ 3.30 ರಿಂದ ಸಂಜೆ 6.30 ರವರೆಗೆ ಮುಳ್ಳೋತ್ಸವ, ಕಾರಣಿಕ  ಮಹೋತ್ಸವ, ದಿನಾಂಕ 6 ರ ಶನಿವಾರ ಬೆಳಗ್ಗೆ 10.30 ಮತ್ತು ರಾತ್ರಿ 8ಕ್ಕೆ ಸ್ವಾಮಿಯ ಓಕುಳಿ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ನೆರವೇರುತ್ತವೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಕೆ. ಶೇಖರಪ್ಪ ಹೇಳಿದರು.

ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಥೋತ್ಸವದ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ದಿನಾಂಕ 4ರ ಬೆಳಗಿನಜಾವ ಗಜ (ಆನೆ) ವಾಹನ ಅಂಬಾರಿ ಉತ್ಸವ ಇತ್ಯಾದಿ ಆಚರಣೆಗಳನ್ನು ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ನೆರವೇರಿಸಲಾಗುತ್ತದೆ.

ಗ್ರಾಮದ ಮಾರುತಿ ಯುವಕ ಸಂಘದ ದಾಸೋಹ ಸಮಿತಿ ವತಿಯಿಂದ ಮತ್ತು ಕುಂದೂರು ಗ್ರಾಮಸ್ಥರು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸದ್ಭಕ್ತ ವೃಂದದವರಿಂದ ಅನ್ನ ದಾಸೋಹ ಸೇವೆ ಇರುತ್ತದೆ. ದಿನಾಂಕ 6 ಮತ್ತು 7ರಂದು ಬಯಲು ಜಂಗಿ ಕುಸ್ತಿಗಳು ನಡೆಯಲಿವೆ.

ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಎಸ್.ಎಂ. ಜಗದೀಶ್, ಪ್ರಧಾನ ಅರ್ಚಕ ಕೆ.ಎಸ್. ಶ್ರೀನಿವಾಸ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಜಿ. ಶಿವಕುಮಾರ್, ಕೆ.ಜಿ. ಗುರುರಾಜ್ ಪಟೇಲ್, ಕುಂದೂರು ಗ್ರಾಪಂ ಮಾಜಿ ಅಧ್ಯಕ್ಷ ಎಸ್. ಧನಂಜಯ್, ರಹಮತ್ ಉಲ್ಲಾ ಖಾನ್, ತಾ.ಪಂ. ಮಾಜಿ ಅಧ್ಯಕ್ಷ ತಿಪ್ಪೇಶಪ್ಪ, ಕುಂದೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಕರಿಬಸಪ್ಪ, ಉಪಾಧ್ಯಕ್ಷ ಚಿದಾನಂದಮೂರ್ತಿ, ಸದಸ್ಯರಾದ ಎಸ್.ಆರ್. ಪ್ರಸನ್ನಕುಮಾರ್, ರೇಖಾ ಎನ್.ಜಿ. ರೇವಣಸಿದ್ಧಪ್ಪ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.

error: Content is protected !!