ಕೊಕ್ಕನೂರು : ಬತ್ತಿದ ದೊಡ್ಡಬಾವಿ

ಕೊಕ್ಕನೂರು : ಬತ್ತಿದ ದೊಡ್ಡಬಾವಿ

ಮಲೇಬೆನ್ನೂರು, ಮಾ. 31 – ಮಳೆ ಇಲ್ಲದೆ ಎಲ್ಲೆಡೆ ಕೆರೆ- ಕಟ್ಟೆಗಳು, ಹಳ್ಳ -ಕೊಳ್ಳಗಳು ಬತ್ತಿ ಬರಿದಾಗುತ್ತಿದ್ದು ಕೊಕ್ಕನೂರು ಗ್ರಾಮದಲ್ಲಿರುವ ಪುರಾ ತನ ದೊಡ್ಡಬಾವಿ (ಪುಷ್ಕರಣಿ) ಕೂಡಾ ಇದೇ ಮೊದಲ ಬಾರಿಗೆ ಬತ್ತಿದೆ. 

ಸುಮಾರು 90 ಅಡಿ ಆಳ ಇರುವ ಕಲ್ಲು ಕಟ್ಟಡದ ಈ ದೊಡ್ಡಬಾವಿಯನ್ನು ಈ ಹಿಂದೆ ಹೂಳು ತೆಗೆದು ಸ್ವಚ್ಛ ಗೊಳಿಸಲು ಪಂಪ್ ಸೆಟ್ ನಿಂದ ನೀರನ್ನು ಹೊರ ಹಾಕಿ ಖಾಲಿ ಮಾಡಲಾಗಿತ್ತು.  ನಂತರ ಒಂದೇ ವಾರದಲ್ಲಿ ಬಾವಿ ಬಸಿ ನೀರಿನಿಂದ ಭರ್ತಿ ಆಗಿತ್ತು. 

ಅಲ್ಲಿಂದ ಇಲ್ಲಿಯ ತನಕ ಬಾವಿ ಸದಾ ಕಾಲ ತುಂಬಿ ಹರಿಯುತ್ತಿತ್ತು. ಈಗ ಒಂದು ತಿಂಗಳಿನಿಂದ ಬಾವಿಯಲ್ಲಿ ನೀರು ಬತ್ತುತ್ತಾ ಬಂದು ತಳ ತಲುಪಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

error: Content is protected !!