ಗಮಕ ತೋರಣ ಕಾರ್ಯಕ್ರಮ ಪ್ರತಿ ಹಳ್ಳಿಗೂ ಪಸರಿಸಿ

ಗಮಕ ತೋರಣ ಕಾರ್ಯಕ್ರಮ ಪ್ರತಿ ಹಳ್ಳಿಗೂ ಪಸರಿಸಿ

ಹರಪನಹಳ್ಳಿ, ಏ.1- ವೇದವ್ಯಾಸರ ಉಪದೇಶದಂತೆ ಇಂದ್ರಕೀಲ ಪರ್ವತದಲ್ಲಿ ಬೀಜಾಕ್ಷರ ಮಂತ್ರ ಪಠಣೆಯಿಂದ ಅರ್ಜುನನು ಪಾಶುಪತಾಸ್ತ್ರವನ್ನು ವಶೀಕರಿಸಿದನು ಎಂದು ಶಿವಮೊಗ್ಗ ಜಿಲ್ಲಾ ಗಮಕ ಕಲಾ ಪರಿಷತ್‌ನ ಕಾರ್ಯದರ್ಶಿ ವಿನಾಯಕ್ ಹೇಳಿದರು.

ಪಟ್ಟಣದ ಚಿದಂಬರ ದೇವಸ್ಥಾನದ ಆವರಣದಲ್ಲಿ  ಕರ್ನಾಟಕ ಗಮಕ ಕಲಾ ಪರಿಷತ್ತು, ಲಕ್ಷ್ಮಿ ಕಲಾ ಸಂಘದ ಹರಪನಹಳ್ಳಿ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಗಮಕ ಕಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೇದವ್ಯಾಸರು ಪಾಂಡವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಅರ್ಜುನನಿಗೆ ಪಾಶುಪತಾಸ್ತ್ರವನ್ನು ಪಡೆದುಕೊಳ್ಳಲು ಇಂದ್ರಕೀಲ ಪರ್ವತ ದಲ್ಲಿ ನಿತ್ಯ ತಪಸ್ಸುಗೈಯ್ಯಲು ತಿಳಿಸಿದರು. ನಂತರ, ದೀರ್ಘಕಾಲ ದವರೆಗೆ ಆಹಾರ ನಿಯಂತ್ರಣ ಮಾಡಿ, ಯೋಗ, ಪ್ರಾಣಾಯಾಮಗಳ ಮೂಲಕ ದೃಢಚಿತ್ತದಿಂದ ಏಕಾಂತ ದಲ್ಲಿ ಶಿವನನ್ನು ಸ್ಮರಿಸುತ್ತಾ ತನ್ನ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಅರ್ಜುನ ಪ್ರಾರಂಭಿಸಿದನು.

ಆ ಸಂದರ್ಭದಲ್ಲಿ ಶಿವ ಮತ್ತು ಪಾರ್ವತಿಯು, ಅರ್ಜುನನ ತಪಸ್ಸು ಪರೀಕ್ಷಿಸಲು ಕಿರಾತಕ ರೂಪವಾಗಿ ಮಾರ್ಪಟ್ಟು ಶಿವ ಮತ್ತು ಅರ್ಜುನನ ನಡುವೆ ಘೋರ ಯುದ್ದ ಜರುಗಿತು, ತದನಂತರ ಶಿವನ ನಿಜರೂಪ ತಿಳಿದ ಅರ್ಜುನನು  ಆಶ್ಚರ್ಯ ಭರಿತನಾ ದನು. ಅರ್ಜುನನ ಪರಾಕ್ರಮ ಹಾಗೂ ತಪಸ್ಸು ಮೆಚ್ಚಿ ಪಾಶುಪತಾಸ್ತ್ರವನ್ನು ಪಡೆದನು ಎಂದು ಕವಿಯು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಕೇಸರಿ ಪ್ರಶಸ್ತಿ ವಿಜೇತೆ ಹರಿಹರದ ಸುಜಾತ ಗೋಪಿನಾಥ್ ಗಮಕ ಗಾಯನ ನಡೆಸಿಕೊಟ್ಟರು. ಗೀತಾ ರಾಯಸಂ, ಡಾ. ನಾಗೇಶ್ ಭಟ್, ಆರ್. ಹನುಮಂತ ರಾವ್ ಮತ್ತು ಇತರರಿದ್ದರು.

error: Content is protected !!