ಉಕ್ಕಡಗಾತ್ರಿ ದಾಟಿದ ಭದ್ರಾ ನೀರು

ಉಕ್ಕಡಗಾತ್ರಿ ದಾಟಿದ ಭದ್ರಾ ನೀರು

ಮಲೇಬೆನ್ನೂರು, ಏ.1- ತುಂಗಭದ್ರಾ ನದಿ ಪಾತ್ರದ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಭದ್ರಾ ಜಲಾಶಯದಿಂದ ನದಿಗೆ ಬಿಡುಗಡೆ ಮಾಡಿರುವ ನೀರು ಸೋಮವಾರ ಸಂಜೆ ನಂದಿಗುಡಿ, ಉಕ್ಕಡಗಾತ್ರಿ ದಾಟಿ ಮುಂದೆ ಸಾಗಿದ್ದು, ಮಂಗಳವಾರ ಬೆಳಗ್ಗೆ ಹರಿಹರ ತಲುಪುವ ಸಾಧ್ಯತೆ ಇದೆ.

ಮಾರ್ಚ್ 29 ರ ರಾತ್ರಿಯಿಂದ ಬಿಡುಗಡೆಯಾದ ಈ ನೀರು, ಏಪ್ರಿಲ್ 6 ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್‌ನಂತೆ ಒಟ್ಟು 2 ಟಿಎಂಸಿ ನೀರು ನದಿಯಲ್ಲಿ ಹರಿಯಲಿದೆ.

error: Content is protected !!