ಕೊಟ್ಟೂರು : ಸಡಗರದ ಕೋಟೆ ವೀರಭದ್ರೇಶ್ವರ ಜೋಡಿ ರಥೋತ್ಸವ

ಕೊಟ್ಟೂರು : ಸಡಗರದ ಕೋಟೆ ವೀರಭದ್ರೇಶ್ವರ ಜೋಡಿ ರಥೋತ್ಸವ

ಕೊಟ್ಟೂರು, ಮಾ.22- ಪಟ್ಟಣದ ಕೋಟೆ ಭಾಗದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ರೇಣುಕಾಚಾರ್ಯ  ಸ್ವಾಮಿ ಮೂರ್ತಿಗಳ ಜೋಡಿ ರಥೋತ್ಸವ ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಗಳೊಂದಿಗೆ ಜರುಗಿತು.

ರಥೋತ್ಸವಕ್ಕೂ ಮುನ್ನ ವಿವಿಧ ದೇವರುಗಳ ಮೂರ್ತಿಯನ್ನು ಆಯಾಗಾರ ಬಳಗದವರು ಬಿರು ದಾವಳಿಗಳೊಂದಿಗೆ ಮೆರವಣಿಗೆ ಮೂಲಕ ರಥದ ಬಳಿಗೆ ಬಂದಾಗ, ಉತ್ಸವ ಮೂರ್ತಿಗಳಿಂದ ರಥಕ್ಕೆ ಪ್ರದಕ್ಷಿಣೆ ಹಾಕಿ ರಥೋತ್ಸವಕ್ಕೆ ಚಾಲನೆ ನೀಡಿದರು.

ತದನಂತರ ಸ್ವಾಮಿಯ ಪಟಾಕ್ಷಿ ಹರಾಜಿನಲ್ಲಿ ಹಳ್ಳಿ ಗಂಗಮ್ಮ 1,50,000ರೂ.ಗೆ ಕೂಗುವ ಮೂಲಕ ತಮ್ಮದಾಗಿಸಿಕೊಂಡರು. ಜೋಡಿ ರಥೋತ್ಸವ ಗೌಡರ ಬೀದಿ, ಹಿರೇಮಠ, ಮುಖ್ಯ ರಸ್ತೆ ಮೂಲಕ ಸಾಗಿ ನಂತರ ದೇವಸ್ಥಾನದ ಬಳಿ ಸಾಗಿತು.

ಆಯಾಗಾರ ಬಳಗದ ಆರ್.ಎಂ ಗುರು, ಬಸವಸ್ವಾಮಿ, ಮಂಜುನಾಥಗೌಡ, ಕನ್ನಳ್ಳಿ ರಾಜಪ್ಪ, ಶಿವಕುಮಾರ ಗೌಡ, ರಾಜುಗೌಡ, ಸೋಮು, ಆರ್. ಎಂ. ಸಂತೋಷ್ ಸೇರಿದಂತೆ, ಸಹಸ್ರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

error: Content is protected !!