ಮಲೇಬೆನ್ನೂರು, ಫೆ.26- ಬರುವ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಲೇಬೆನ್ನೂರು ಪಟ್ಟಣದ ಲ್ಲಿರುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಮತಗಟ್ಟೆ ಕೇಂದ್ರದ ಸುಸ್ಥಿರ ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದೆಂದು ಪರಿಶೀಲನೆ ನಂತರ ಉಪತಹಶೀಲ್ದಾರ್ ಆರ್.ರವಿ `ಜನತಾವಾಣಿ’ಗೆ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯ ನಿರೀಕ್ಷಕ ಶಿವರಾಜ್ ಮತ್ತು ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಈ ವೇಳೆ ಹಾಜರಿದ್ದರು.