ಎಸ್ಸೆಸ್ – ಎಸ್ಸೆಸ್ಸೆಂ ಅಭಿನಂದನೆ
ದಾವಣಗೆರೆ, ಫೆ. 6 – ಎಸ್ ಎಸ್ ಎಂ ಮತ್ತು ಮಣಿ ಸರ್ಕಾರ್‌ರವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಹೊನಲು ಬೆಳಕಿನ ಪ್ರೊ. ಕಬ್ಬಡ್ಡಿ 2024 ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಗಳಲ್ಲಿ ನಗರದಲ್ಲಿ ಮೊದಲ ಬಾರಿಗೆ ಕಬ್ಬಡಿ ಪಂದ್ಯಾವಳಿ ಯಶಸ್ವಿಯಾಗಿ ನಡೆದು, ಈ ಪಂದ್ಯಾವಳಿಯಲ್ಲಿ ದಿನೇಶ್ ಕೆ. ಶೆಟ್ಟಿ ಅವರ ಡಿಕೆಎಸ್ ಸ್ಟೋನ್ ಪವರ್ ತಂಡವು ಪ್ರಥಮ ಬಹುಮಾನವಾಗಿ ಆಕರ್ಷಕ ಟ್ರೋಫಿ ಮತ್ತು ಒಂದು ಲಕ್ಷ ರೂ. ಪಡೆಯಿತು.
ಈ ಕಾರ್ಯಕ್ರಮದಲ್ಲಿ ಸದ್ದಾಂ ಹುಸೇನ್ ಮುಸ್ತಫಾ, ನಿಖಿತ್ ಶೆಟ್ಟಿ, ನಿಧೀಶ್ ಶೆಟ್ಟಿ, ಆಟಗಾ ರರಾದ ಮನು, ಕಿರಣ್, ಸಾಗರ್, ಮಧು ನಾಯಕ್, ಯೇಸುರಾಜ್, ಸಚಿನ್, ಸುದೀಪ್, ತಿಪ್ಪ, ಪವನ್ ತರಕಾರಿ ನಾಗರಾಜ್, ಭಾನುಪ್ರಕಾಶ್, ಯುವರಾಜ್ ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ದಿನೇಶ್ ಕೆ ಶೆಟ್ಟಿ ಡಿಕೆಎಸ್ ಸ್ಟೋನ್ ಪವರ್ ತಂಡಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಪ್ರಭಾ ಮಲ್ಲಿಕಾರ್ಜುನ್ ಅವರುಗಳು ಟ್ರೋಫಿ ವಿತರಿಸಿ ಅಭಿನಂದಿಸಿದ್ದಾರೆ.