ಮಲೇಬೆನ್ನೂರು, ಡಿ.4- ಉಕ್ಕಡಗಾತ್ರಿಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಗ್ರಾಮದ ಯುವಕರಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಶೇ.80 ರಷ್ಟು ಅಂಕ ತೆಗೆದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಲಾಯಿತು.
ಶಾಸಕ ಬಿ.ಪಿ.ಹರೀಶ್, ವಕೀಲ ಮಾರುತಿ ಬೇಡರ್, ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್, ಸಿದ್ದಪ್ಪ ಬಸಲಿ, ಶಿಕ್ಷಕ ಮಾಲತೇಶ್, ಡಾ.ನಾಗರಾಜ್, ಹೇಮಂತ್, ದಾನಯ್ಯ, ಸಿದ್ದೇಶ್, ವಸಂತ್, ನಾಗರಾಜ ದೋಣಿ, ಹನುಮಂತ, ಬಸವರಾಜ ಕುರಿಯರ್ ಕರಿಬಸವ, ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕರೂ ಆದ ವಕೀಲ ದೊಡ್ಮನಿ ಮಂಜುನಾಥ್, ಸಂಗೀತ ಬಂಗೇರ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರದ ದಾನಿಯಾಗಿದ್ದ ಬಿ.ಜಿ.ವಿನಯ್ ಕುಮಾರ್ ಅವರ ಪರವಾಗಿ ಅವರ ಅಳಿಯ ಶರತ್ ಮತ್ತಿತರರು ಭಾಗವಹಿಸಿದ್ದರು.