ಹರಿಹರ, ಅ. 26- ಭೂ ಪರಿವರ್ತನೆಯಾಗಿ ದಾ.ಹ. ಅಭಿವೃದ್ಧಿ ಪ್ರಾಧಿಕಾರದಿಂದ ವಸತಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ಪಡೆದ ನಿವೇಶಗಳಿಗೆ ಡೋರ್ ನಂಬರ್ ನೀಡುವುದಕ್ಕೆ ಮೊನ್ನೆ ನಡೆದ ನಗರಸಭೆ ಅಧಿವೇಶನದಲ್ಲಿ ಸರ್ವಾನು ಮತದಿಂದ ಒಪ್ಪಿಗೆ ಸೂಚಿಸಲಾಯಿತು.
ಈಚೆಗೆ ಜರುಗಿದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ಈ ವಿಷಯವನ್ನು ಮುಂದೂಡಲಾಗಿತ್ತು. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ನಿಂಬಕ್ಕ ಚಂದಾಪೂರ್ ಅವರ ಅಧ್ಯಕ್ಷತೆಯಲ್ಲಿ ಇದು ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಪೌರಾಯುಕ್ತ ಐಗೂರು ಬಸವರಾಜ್, ಸೌಮ್ಯ ಸಿದ್ದಣ್ಣ ದಾವಣಗೆರೆ ಇವರ ಗುತ್ತೂರು ಗ್ರಾಮದ 9 ಗುಂಟೆ, ಮಾಜೇನಹಳ್ಳಿ ಗ್ರಾಮದ ಬಿ. ಸೈಯದ್ ಅನ್ವರ್ರವರ 1 ಎಕರೆ, ಪೆಟ್ರೋಲ್ ಬಂಕ್ ಉದ್ದೇಶಕ್ಕಾಗಿ ಏಕ ನಿವೇಶನ, ಬಿ. ಚಿದಾನಂದಪ್ಪ ನವರ ಅಮರಾವತಿ ಗ್ರಾಮದ 12
ಎಕರೆ 38 ಗುಂಟೆ ಮತ್ತು 3 ಎಕರೆ ಹಾಗೂ 15 ಎಕರೆ 38 ಗುಂಟೆ, ಮಾಜೇನಹಳ್ಳಿ ಗ್ರಾಮದ ಅಯೂಬ್ ಪೈಲ್ವಾನ್ ದಾವಣಗೆರೆ 1 ಎಕರೆ 20 ಗುಂಟೆ, ದೇವೇಂದ್ರಪ್ಪ ಹಿರೇಕೆರೂರು 1 ಎಕರೆ 20 ಗುಂಟೆ, ಎಂ.ಕೆ ಸುನಂದ 6 ಎಕರೆ 30 ಗುಂಟೆ, ಶೇರಾಪುರ ಗ್ರಾಮದ ಸುಭಾಷ್ ಬೊಂಗಾಳೆ 1 ಎಕರೆ 16 ಗುಂಟೆ ಜಮೀನುಗಳಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿ ಅಭಿವೃದ್ಧಿ ಪ್ರಾಧಿಕಾರದಿಂದ ವಸತಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ಆಗಿದ್ದು, ಸ್ವತ್ತಿನಲ್ಲಿ ಬರುವ ನಿವೇಶನಗಳಿಗೆ ಡೋರ್ ನಂಬರ್ ನೀಡುವ ಕುರಿತು ಪ್ರಸ್ತಾಪ ಮಾಡಿದಾಗ ಸರ್ವ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್ ಅವರು ತಮ್ಮ ಆಡಳಿತದ ಅವಧಿಯು ದಿ. 28 ರಂದು ಕೊನೆಯಾಗಲಿದ್ದು, ನಮಗೆ ಸಹಕಾರ ನೀಡಿರುವ ಸರ್ವ ಸದಸ್ಯರಿಗೆ, ಅಧಿಕಾರಿ ವರ್ಗದವರಿಗೆ ಮತ್ತು ಸಿಬ್ಬಂದಿಗಳಿಗೆ, ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಅರ್ಪಿಸುವುದಾಗಿ ಹೇಳಿದರು.
ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಆರ್.ಸಿ. ಜಾವೇದ್, ದಿನೇಶ್ ಬಾಬು, ಪಿ.ಎನ್ ವಿರುಪಾಕ್ಷಪ್ಪ, ಅಶ್ವಿನಿ ಕೃಷ್ಣ, ಎ.ಬಿ. ವಿಜಯಕುಮಾರ್, ರತ್ನ ಡಿ ಉಜ್ಜೇಶ್, ಉಷಾ ಮಂಜುನಾಥ್, ಶಾಹಜಾದ್, ಗುತ್ತೂರು ಜಂಬಣ್ಣ, ಹನುಮಂತಪ್ಪ, ಸುಮಿತ್ರಾ ಮರಿದೇವ, ಪಕ್ಕೀರಮ್ಮ, ಬಿ ಅಲ್ತಾಫ್, ಲಕ್ಷ್ಮಿ ಮೋಹನ್, ಕವಿತಾ ಮಾರುತಿ, ಎಂ.ಎಸ್. ಬಾಬುಲಾಲ್, ರಜನಿಕಾಂತ್, ಎಸ್.ಎಂ. ವಸಂತ್, ಅಬ್ದುಲ್ ಅಲಿಂ, ಎಇಇ ತಿಪ್ಪೇಸ್ವಾಮಿ, ಮ್ಯಾನೇಜರ್ ಶಿವಕುಮಾರ್ ಇತರರು ಹಾಜರಿದ್ದರು.
ಸಭೆಯಿಂದ ದೂರ: ಡೋರ್ ನಂಬರ್ ಕೊಡುವ ವಿಚಾರ ವಿರೋಧಿಸಿ ಹೇಳಿಕೆ ಕೊಟ್ಟಿದ್ದ ನಗರಸಭೆ ಸದಸ್ಯರಾದ ದಾದಾ ಖಲಂದರ್, ಮುಜಾಮಿಲ್ ಬಿಲ್ಲು ಇಂದಿನ ಸಭೆಯಲ್ಲಿ ಪಾಲ್ಗೊಳ್ಳದೇ ಅಂತರವನ್ನು ಕಾಯ್ದುಕೊಂಡಿದ್ದರು.