ಹರಪನಹಳ್ಳಿ, ಸೆ. 14 – ಕಲ್ಯಾಣ ಕರ್ನಾಟಕದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೂ ಒಬ್ಬರೂ ಕೂಡ ಈಶಾನ್ಯ ಪದವಿಧರರ ಕ್ಷೇತ್ರದಿಂದ ಚುನಾಯಿತರಾಗಿಲ್ಲ ಈ ಬಾರಿ ಈ ಭಾಗದಲ್ಲಿ ಪದವಿಧರರು ಹೆಚ್ಚಿನ ಸಂಖೆಯಲ್ಲಿ ನೊಂದಾಣಿ ಮಾಡಿಸುವ ಮೂಲಕ ನನಗೆ ಸಹಕಾರ ನೀಡಬೇಕು ಎಂದು ಈಶಾನ್ಯ ಪದವಿಧರರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ನಾರಾ ಪ್ರತಾಪ್ ರೆಡ್ಡಿ ಹೇಳಿದರು.
ಪಟ್ಟಣದ ನಂದಿ ರೆಸಾರ್ಟ್‌ನಲ್ಲಿ ಕರೆದಿದ್ದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ನಾನು ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿದ್ದೇನೆ. ಆದರೆ, ಈ ಬಾರಿ ಗೆಲ್ಲುಲು ಈ ಭಾಗದವರು ಹೆಚ್ಚಿನ ಸಹಕಾರ ನೀಡಬೇಕು ಹಿಂದೆ ಗೆದ್ದು ಹೋದವರು ಇಲ್ಲಿಯವರೆಗೂ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಹರಪನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ದಿಗಾ ಗಿ ನನಗೆ ಅವಕಾಶ ನೀಡಿದರೆ ನಾನು ಉತ್ತಮ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಮುಖಂಡ ಪಿ. ಮಹಾಬಲೇಶ್ವರಗೌಡ ಮಾತನಾಡಿ, ಹರಪನಹಳ್ಳಿ ತಾಲ್ಲೂಕು ಹಿಂದು ಳಿದ ತಾಲ್ಲೂಕು ಆಗಿದ್ದು ಇಲ್ಲಿಯವರೆಗೆ ಗೆದ್ದ ಅಭ್ಯರ್ಥಿಗಳು ಉತ್ತಮವಾದ ಕೆಲಸ ಮಾಡಿಲ್ಲ. ಈ ಬಾರಿ ಗ್ರಾಮ ಮಟ್ಟದಿಂದ ಪದವೀಧರರ ನೋಂದಣಿ ಮಾಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಪ್ರತಾಪ್ ರೆಡ್ಡಿಯವರ ಗೆಲುವಿಗೆ ಇವತ್ತಿನಿಂದಲೇ ನಾವು ಕಂಕಣ ಬದ್ದರಾಗಿ ಕೆಲಸ ಮಾಡೋಣ ಎಂದರು.
ಮುಖಂಡರಾದ ಆಲದಹಳ್ಳಿ ಷಣ್ಮುಖಪ್ಪ ಹಾಗೂ ವೈ.ಕೆ.ಬಿ.ದುರುಗಪ್ಪ, ಯುವ ಕಾಂಗ್ರೆಸ್ ಪಕ್ಷದ ಎಚ್. ಬಾಲಾಜಿ ಇರ್ಷಾದ್, ರಿಯಾಜ್ ಕೋಡಿಹಳ್ಳಿ ಗುರುಬಸವರಾಜ ಮಾತನಾಡಿದರು.
ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ಮಸಲವಾಡದ ರೇವಣಸಿದ್ದಪ್ಪ, ಹೆಚ್.ವಸಂತಪ್ಪ, ಶಮಿಹುಲ್ಲಾ. ದುಗ್ಗಾವತಿ ಮಂಜಣ್ಣ, ಹಲವಾಗಲು ಅಜೇಯ, ಪ್ರಶಾಂತ, ಹೆಚ್. ಎಂ. ವಿಜಯಕುಮಾರ, ಸಾಸ್ವಿಹಳ್ಳಿ ನಾಗರಾಜ, ಹರಿಯಮ್ಮನಹಳ್ಳಿ ಶಿವರಾಜ, ಮೈದೂರು ಪ್ರವೀಣ, ಕಣಿವಿಹಳ್ಳಿ ರಾಜಪ್ಪ, ಮಂಜುನಾಥ ಸೇರಿದಂತೆ ಇತರರು ಇದ್ದರು.