ನಗರದಲ್ಲಿ ಇಂದು ಭಕ್ತಿ, ಭಾವಗೀತೆ, ಭಜನೆ

ನಗರದಲ್ಲಿ ಇಂದು ಭಕ್ತಿ, ಭಾವಗೀತೆ, ಭಜನೆ

ಯಲ್ಲಮ್ಮನಗರ 3 ನೇ ಮೇನ್, 8 ನೇ ಕ್ರಾಸ್ ನಲ್ಲಿರುವ ಶ್ರೀ ಗುರು ಗೋವಿಂದ ಶಿವಯೋಗೀಶ್ವರರ ಮತ್ತು ಶ್ರೀ ಶಿಶುನಾಳ ಶರೀಫ ಶಿವಯೋಗೀಶ್ವರರ ಪುಣ್ಯಾಶ್ರಮದಲ್ಲಿ ಇಂದು 31 ನೇ ವರ್ಷದ ಶ್ರಾವಣ ಮಾಸ ಸಪ್ತಾಹ ಮತ್ತು ಭಜನೆ ಪ್ರಾರಂಭವಾಗಲಿದೆ.

ಸಂಜೆ 7 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ರೇಣುಕ ವಾದ್ಯ ವೃಂದದವರಿಂದ ಭಕ್ತಿಗೀತೆ, ಭಾವಗೀತೆ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಾಳೆ ಶನಿವಾರ ಬೆಳಿಗ್ಗೆ 8 ಗಂಟೆಗೆ ರಾಜ ಬೀದಿಗಳಲ್ಲಿ ಶಿವಯೋಗಿಯವರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ಕೊಂಡೊಯ್ಯಲಾಗುತ್ತದೆ. ನಂತರ ಮಧ್ಯಾಹ್ನ 12 ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. 

error: Content is protected !!