ಸೇಂಟ್ ಜಾನ್ಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಸೇಂಟ್ ಜಾನ್ಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ದಾವಣಗೆರೆ, ಸೆ. 13 – ಸೇಂಟ್‍ಜಾನ್ಸ್ ವಿದ್ಯಾಸಂಸ್ಥೆಯ ನರ್ಸರಿ ವಿಭಾಗದ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷವನ್ನು ಧರಿಸಿ ಕೃಷ್ಣನ ಬಾಲ್ಯ ಲೀಲೆಗಳನ್ನು ತಮ್ಮ ತೊದಲು ನುಡಿಯ ಮೂಲಕ ಕೃಷ್ಣ ಸಂದೇಶವನ್ನು ಸಾರುತ್ತಾ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು.

ವಿದ್ಯಾಸಂಸ್ಥೆಯ ಕಾರ್ಯದರ್ಶಿ ಉಮಾಪತಯ್ಯ ಹಾಗೂ ಅವರ ಪತ್ನಿ ಶ್ರೀಮತಿ ಶಾಂತಲಾ ಆತಿಥ್ಯ ವಹಿಸಿದ್ದರು. ಮಕ್ಕಳು ಶ್ರೀಕೃಷ್ಣಂ ಒಂದೇ ಜಗದ್ಗುರು, ಯದಾ ಯದಾಹಿಃ ಧರ್ಮಶ್ಚ ಎಂದು ಕೃಷ್ಣ ಸಂದೇಶವನ್ನು ಸಾರುತ್ತಾ ಕಾರ್ಯಕ್ರಮದ ಮೆರುಗುನ್ನು ಇಮ್ಮಡಿಗೊಳಿಸಿದರು. 

ಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್ ಕುಮಾರ್, ಖಜಾಂಚಿಗಳಾದ ಪ್ರವೀಣ್ ಹುಲ್ಲುಮನೆಯವರು ಪ್ರಾಂಶುಪಾಲ ಆರ್. ಸಯ್ಯದ್ ಆರಿಫ್, ಶ್ರೀಮತಿ ಪ್ರೀತಾ.ಟಿ.ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!