ಮಾಯಕೊಂಡ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಎಸ್.ಆರ್.ಬಸವರಾಜಪ್ಪ

ಮಾಯಕೊಂಡ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಎಸ್.ಆರ್.ಬಸವರಾಜಪ್ಪ

ಮಾಯಕೊಂಡ, ಸೆ. 14 – ಇಲ್ಲಿನ ಗ್ರಾಮ ಪಂಚಾಯತಿ  ಉಪಾಧ್ಯಕ್ಷ ರಾಗಿ ಎಸ್. ಆರ್. ಬಸವರಾಜಪ್ಪ ಅವಿರೋಧವಾಗಿ‌ ಆಯ್ಕೆಯಾದರು. 

ಎನ್. ಎಂ.‌ ಮಂಜುನಾಥ ಅವರ ರಾಜೀನಾಮೆಯಿಂದ ಖಾಲಿಯಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಎಸ್. ಆರ್. ಬಸವರಾಜಪ್ಪ ಹೊರತು ಪಡಿಸಿ ಬೇರೆ ಯಾವ ನಾಮಪತ್ರ ಸಲ್ಲಿಕೆಯಾಗದ ಕಾರಣ ಅವರನ್ನು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿಲ್ಲಾ ಪಂಚಾಯತಿ ಸಹಾಯಕ‌ ಯೋಜನಾಧಿಕಾರಿ ಎಚ್. ಬಸವರಾಜ್ ಘೋಷಿಸಿದರು. 

ಗ್ರಾಮ ಪಂಚಾಯತಿ ಸದಸ್ಯರಾದ ವಗ್ಗಪ್ಪರ ಮಲ್ಲಪ್ಪ, ಎನ್.ಎಂ.  ಮಂಜುನಾಥ, ಹನುಮಂತಪ್ಪ, ಲತಾ ಮಲ್ಲಿಕಾರ್ಜುನ, ಸಾಕಮ್ಮ ನಿಂಗರಾಜು,  ಸುನಿತಾ ಹನುಮಂತಪ್ಪ, ಗೌರಮ್ಮ ಶಿವಮೂರ್ತಿ, ಮುಖಂಡ ರಾದ ರಾಮಜೋಗಿ ಪರಮೇಶ್ವರಪ್ಪ, ರೇವಣ ಸಿದ್ದಪ್ಪ, ಮಲ್ಲೇಶ್, ನಿಂಗಣ್ಣ, ಪಿಡಿಒ. ನಾಗರಾಜ್ ಮತ್ತು ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

error: Content is protected !!